ಕರ್ನಾಟಕ

karnataka

ETV Bharat / state

ಹೊಸಕೋಟೆ ಸರ್ಕಾರಿ ‌ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಪಾಸಿಟಿವ್​ - ಹೊಸಕೋಟೆ ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ದೃಢ ಸುದ್ದಿ

ಹೊಸಕೋಟೆ ನಗರದ ನಿವಾಸಿ 37 ವರ್ಷದ ಸೋಂಕಿತ ವ್ಯಕ್ತಿಯಲ್ಲಿ (ಪಿ-7578) ಜ್ವರ ಕಂಡು ಬಂದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೊಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿದೆ.

ಸರ್ಕಾರಿ ‌ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಪಾಸಿಟಿವ್​
ಸರ್ಕಾರಿ ‌ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಪಾಸಿಟಿವ್​

By

Published : Jun 18, 2020, 8:41 AM IST

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಹೊಸಕೋಟೆ ತಹಶೀಲ್ದಾರ್ ಗೀತಾ ಅವರು ತಿಳಿಸಿದ್ದಾರೆ.

ಹೊಸಕೋಟೆ ನಗರದ ನಿವಾಸಿ 37 ವರ್ಷದ ಸೋಂಕಿತ ವ್ಯಕ್ತಿಯಲ್ಲಿ(ಪಿ-7578) ಜ್ವರ ಕಂಡು ಬಂದ ಹಿನ್ನೆಲೆ ಕೋವಿಡ್-19 ಆರೋಗ್ಯ ತಪಾಸಣೆಗೊಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಸರ್ಕಾರಿ ‌ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್‌ಗೆ ಕೊರೊನಾ ಪಾಸಿಟಿವ್​

ಸೋಂಕಿತ ವ್ಯಕ್ತಿ ಹೊಸಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದೆ ಎಂದು ತಿಳಿದ ತಕ್ಷಣ ಆಸ್ಪತ್ರೆಯನ್ನು ಸೀಲ್​​​​ಡೌನ್ ಮಾಡಲಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳನ್ನ ಎಂವಿಜೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಓದಿ: ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ... ಪೊಲೀಸ್ ಠಾಣೆ, ತಹಶಿಲ್ದಾರ್ ಕಚೇರಿ ಸೀಲ್ ​ಡೌನ್​​

ಸೋಂಕಿತ ವ್ಯಕ್ತಿಯು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ABOUT THE AUTHOR

...view details