ಕರ್ನಾಟಕ

karnataka

ETV Bharat / state

ಎಲ್ಲೆಲ್ಲೂ ಕೊರೊನಾ ಕರಿನೆರಳು: ಪರಮಾತ್ಮನಿಂದಲೂ ದೂರ ಉಳಿದ ಭಕ್ತರು

ಕೊರೊನಾ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಅಲರ್ಟ್​​ ಘೋಷಣೆ ಮಾಡಿದ ಹಿನ್ನೆಲೆ ಜನರು ದೇವಸ್ಥಾನಕ್ಕೆ,ಪ್ರವಾಸಿತಾಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದು,ನೇರವಾಗಿ ಇದು ಬೀದಿಬದಿ ವ್ಯಾಪಾರಿಗಳು ನಷ್ಟಕ್ಕೊಳಗಾಗಿದ್ದಾರೆ.

corona effect
ಎಲ್ಲೆಲ್ಲೂ ಕೊರೊನಾ ಭೀತಿ

By

Published : Mar 15, 2020, 8:04 PM IST

ಮೈಸೂರು:ಕೋವಿಡ್ -19(ಕೊರೊನಾ ವೈರಸ್) ಭೀತಿಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್​​ ಘೋಷಣೆ ಮಾಡಿದ ಹಿನ್ನೆಲೆ ದೇವಸ್ಥಾನಗಳಲ್ಲಿ ಬರುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಎಲ್ಲೆಲ್ಲೂ ಕೊರೊನಾ ಭೀತಿ

ಕೊರೊನಾ ವೈರಸ್​​ ತಗುಲುವ ಹಿನ್ನೆಲೆ ಪ್ರವಾಸಿಗರಿಲ್ಲದೇ ಪ್ರವಾಸಿ ತಾಣಗಳು ಬಣಗುಡುತ್ತಿದೆ. ಪ್ರವಾಸೋದ್ಯಮ ಕ್ಷೇತ್ರ , ಉದ್ಯಮವಲಯದ ಮೇಲೆ ಕೊರೊನಾ ವೈರಸ್​​​ನ ಭಾರಿ ಹೊಡೆತ ಬಿದ್ದಿದ್ದು, ಬೀದಿಯಲ್ಲಿ ತರಕಾರಿ ಮಾರುವವರ ಹಾಗೂ ದಿನಗೂಲಿ ನೌಕರರ ಸ್ಥಿತಿ ಹೇಳತೀರದಾಗಿದೆ. ದೇವಾಲಯಗಳಿಂದ ಭಕ್ತರು ದೂರ ಇದ್ದಾರೆ. ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನ, ದಕ್ಷಿಣಕಾಶಿಯೆಂದು ಖ್ಯಾತಿ ಗಳಿಸಿರುವ ನಂಜುಂಡೇಶ್ವರ ದೇವಾಲಯ, ತಲಕಾಡಿನ ಸೋಮೇಶ್ವರ ದೇವಾಲಯ, ಅರಮನೆ ಕೋಟೆ ಆಂಜನೇಯ ದೇವಾಲಯ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಹಲವು ದೇವಾಲಯಗಳಿಗೆ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ಇದರಿಂದ ದೇವಾಲಯಗಳ‌ ಸುತ್ತ ಪೂಜಾ ಸಾಮಗ್ರಿ ಮಾರಾಟ ಮಾಡುವ ಹಾಗೂ ದೇವಾಲಯಗಳ ಆದಾಯಕ್ಕೆ ಹೊಡೆತ ಬಿದ್ದಿದೆ. ಇನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ,ಮೃಗಾಲಯಕ್ಕೆ ‌ಭಾನುವಾರ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದರು.ಆದರೆ, ಕೊರೊನಾ ವೈರಸ್ ಭೀತಿಗೆ ಬಾಗಿಲುಗಳು ಬಂದ್ ಮಾಡಿರುವುದರಿಂದ ಪ್ರವಾಸಿತಾಣಗಳಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಕೊರೊನಾ ವೈರಸ್ ಭೀತಿ ರಾಷ್ಟ್ರೀಯ ಹೆದ್ದಾರಿ 4 ಖಾಲಿ ಖಾಲಿ!

ನೆಲಮಂಗಲ:ರಾಜ್ಯದಲ್ಲಿ ಕೊರೊನಾ ಹಾವಳಿಯಿಂದ ಸರ್ಕಾರ ಸಭೆ ಸಮಾರಂಭ, ಸಿನಿಮಾ ಚಿತ್ರಮಂದಿರ ಬಂದ್ ಮಾಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಿದೆ. ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ವಾಹನಗಳ ಓಡಾಟ ಇಲ್ಲದೆ ರಸ್ತೆ ಖಾಲಿ ಖಾಲಿಯಾಗಿದೆ.

ಎಲ್ಲೆಲ್ಲೂ ಕೊರೊನಾ ಭೀತಿ

ಬೆಂಗಳೂರು ನಗರದ ಕಡೆ ಸಾಗುವ ವಾಹನಗಳ ಸಂಖ್ಯೆ ಇಳಿಮುಖವಾಗಿದೆ. ಇನ್ನೂ ನೆಲಮಂಗಲದ ನವಯುಗ ಟೋಲ್ ಬಳಿ ಮೊದಲು ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಆದರೆ ಇಂದು ವಾಹನ ಓಡಾಟ ವಿರಳವಾಗಿದೆ.

ABOUT THE AUTHOR

...view details