ಕರ್ನಾಟಕ

karnataka

ETV Bharat / state

ವಿದ್ಯುತ್ ತಂತಿ ಸ್ಪರ್ಶ... ಕಂಟೈನರ್​ನಲ್ಲಿದ್ದ ಕ್ಲೀನರ್​​ಗೆ ಬೆಂಕಿ ಹೊತ್ತಿಕೊಂಡು ಗಂಭೀರ ಗಾಯ

ತಮಿಳುನಾಡಿಂದ ಹೊಸೂರಿನಿಂದ ಹೊಸಕೋಟೆಗೆ ಸರ್ಜಾಪುರ ಮಾರ್ಗದಲ್ಲಿ ಸಾಗಿದ ಕಂಟೈನರ್ ಎತ್ತರ ಮತ್ತು ಉದ್ದವಾಗಿದ್ದರಿಂದ ತಿರುವಿನಲ್ಲಿ ತಿರುಗಿಸಿಕೊಂಡು ಮುಂದೆ ಸಾಗಿತ್ತು. ಎದುರಿಗೆ ಬಂದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡುವ ಆತುರದಲ್ಲಿ ಚಾಲಕ ರಾಬಿನ್ ಖಾನ್ ರಸ್ತೆಯ ಎಡಕ್ಕೆ ವಾಹನ ಚಲಾಯಿಸಿದಾಗ ಕಡಿಮೆ ಎತ್ತರದಲ್ಲಿ ಜೋತು ಬಿದ್ದ ತಂತಿ ತಗುಲಿ ವಾಹನದಲ್ಲಿ ವಿದ್ಯುತ್ ಪ್ರವಹಿಸಿದೆ.

ವಿದ್ಯುತ್ ತಂತಿ ಸ್ಪರ್ಶದಿಂದ ಗಾಯ
ವಿದ್ಯುತ್ ತಂತಿ ಸ್ಪರ್ಶದಿಂದ ಗಾಯ

By

Published : Nov 29, 2020, 6:28 AM IST

ಆನೇಕಲ್:11ಕೆವಿ ವಿದ್ಯುತ್ ತಂತಿ ಕಂಟೈನರ್​ಗೆ ಸೋಕಿದ ಪರಿಣಾಮ ವಾಹನದಲ್ಲಿದ್ದ ಕ್ಲೀನರ್​ಗೆ ಕೈ-ಕಾಲು ಹೊಟ್ಟೆ ಸುಟ್ಟು ಗಂಭೀರ ಗಾಯಗಳಾದ ಘಟನೆ ಆನೇಕಲ್​ನಲ್ಲಿ ನಡೆದಿದೆ.

ತಾಲೂಕಿನ ಸರ್ಜಾಪುರ-ಹೊಸಕೋಟೆ ರಸ್ತೆಯ ಬೆಳ್ಳಗೆರೆ ಕೆಲ್ಸಿ ಶುದ್ದ ಕುಡಿಯುವ ಕಾರ್ಖಾನೆಯ ತಿರುವಿನಲ್ಲಿ ಈ ಘಟನೆ ನಡೆದಿದೆ. ದೆಹಲಿ ಮೂಲದ ಸದ್ದಾಂ ಖಾನ್ ಎಂಬುವವನು ಗಾಯಗೊಂಡಿದ್ದು, ಸ್ಥಳಕ್ಕೆ ಬಂದ ಸಂಚಾರಿಗಳ ನೆರವಿನಿಂದ ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾನೆ. ಆದರೂ ಕಾಲಿನ ಪಾದ ಬೆರಳು, ಕೈ ಕಿಬ್ಬೊಟ್ಟೆಗೆ ಸಂಪೂರ್ಣ ಸುಟ್ಟಿದಲ್ಲದೆ ಕೆಳಕ್ಕೆ ಬಿದ್ದದ್ದರಿಂದ ಪ್ರಜ್ಞೆ ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.

ತಮಿಳುನಾಡಿಂದ ಹೊಸೂರಿನಿಂದ ಹೊಸಕೋಟೆಗೆ ಸರ್ಜಾಪುರ ಮಾರ್ಗದಲ್ಲಿ ಸಾಗಿದ ಕಂಟೈನರ್ ಎತ್ತರ ಮತ್ತು ಉದ್ದವಾಗಿದ್ದರಿಂದ ತಿರುವಿನಲ್ಲಿ ತಿರುಗಿಸಿಕೊಂಡು ಮುಂದೆ ಸಾಗಿತ್ತು. ಎದುರಿಗೆ ಬಂದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡುವ ಆತುರದಲ್ಲಿ ಚಾಲಕ ರಾಬಿನ್ ಖಾನ್ ರಸ್ತೆಯ ಎಡಕ್ಕೆ ವಾಹನ ಚಲಾಯಿಸಿದಾಗ ಕಡಿಮೆ ಎತ್ತರದಲ್ಲಿ ಜೋತು ಬಿದ್ದ ತಂತಿ ತಗುಲಿ ವಾಹನದಲ್ಲಿ ವಿಚಿತ್ರ ಕಂಪನವುಂಟಾಗಿದೆ.

ವಿದ್ಯುತ್ ತಂತಿ ಸ್ಪರ್ಶಗೊಂಡು ಕಂಟೈನರ್​ನಲ್ಲಿದ್ದ ಕ್ಲೀನರ್​​ಗೆ ಬೆಂಕಿ ಹೊತ್ತಿಕೊಂಡು ಗಂಭೀರ ಗಾಯ

ಈ ವೇಳೆ ಕ್ಲೀನರ್​ಗೆ ನೋಡಲು ಸೂಚಿಸಿದ್ದಾನೆ. ತಕ್ಷಣ ಲಾರಿ ಬಾಗಿಲು ತೆರೆದು ಮೇಲಕ್ಕೆ ನೋಡಲು ದೇಹದ ಹೊರ ಹಾಕಿದ ತಕ್ಷಣ ದೇಹಕ್ಕೆ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಚಾಲಕ ಲಾರಿಯಿಂದ ರಸ್ತೆಗೆ ದುಮುಕಿದ್ದಾನೆ. ಮತ್ತು ಕ್ಲೀನರ್ ವಿದ್ಯುತ್ ಸ್ಪರ್ಶದಿಂದ ಕೆಳಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಆತನನ್ನು 112 ತುರ್ತು ಸೇವೆಗೆ ಕರೆ ಮಾಡಿದಾಗ ಹೊಸಕೋಟೆ ಅನುಗೊಂಡಹಳ್ಳಿ ಪೊಲೀಸ್ ಠಾಣಾ ವಾಹನ ಬಂದು ಗಾಯಾಳುವನ್ನು ಆಸ್ಪತ್ರೆಗೆ ಕರೆದೋಯ್ದಿದ್ದಾರೆ.

ಸರ್ಜಾಪುರ ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಪರಿಣಾಮ, ಬಾರಿ ವಾಹನಗಳು ಈ ಮಾರ್ಗದಲ್ಲಿ ಸಂಚಾರ ಬದಲಿಸಿವೆ. ಆದರೆ ಹಳ್ಳಿಗಳ ಕಿರಿದಾದ ರಸ್ತೆಯಲ್ಲಿ ಕೆಳಗೆ ವಿದ್ಯುತ್ ತಂತಿಗಳು ಜೋತುಬಿದ್ದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಬೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗಳನ್ನು ಎತ್ತರಿಸಬೇಕು, ಲೋಕೋಪಯೋಗಿ ಇಲಾಖೆಯವರು ರಸ್ತೆಗಳ ತಿರುವಿನಲ್ಲಿ ವೇಗಮಿತಿಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details