ಕರ್ನಾಟಕ

karnataka

ETV Bharat / state

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ, ಗ್ರಾಮಸ್ಥರಿಂದ ಪ್ರತಿಭಟನೆ

ಕಾಂಪೌಂಡ್​ ನಿರ್ಮಿಸಿ ರಸ್ತೆಯ ಪಥಬದಲಾವಣೆ ಮಾಡಲು ಮುಂದಾದ ಕೆಐಎಡಿಬಿ - ನಾಲ್ಕು ಗ್ರಾಮಗಳ ಗ್ರಾಮಸ್ಥರಿಂದ ಪ್ರತಿಭಟನೆ - ಪ್ರತಿಭಟನೆಗೆ ಸಾಥ್​ ನೀಡಿದ ದೇವನಹಳ್ಳಿ ಶಾಸಕ ನಿನರ್ಗ ನಾರಾಯಣಸ್ವಾಮಿ

construction-of-compound-across-road-protest-by-villagers
ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ, ಗ್ರಾಮಸ್ಥರಿಂದ ಪ್ರತಿಭಟನೆ

By

Published : Jan 30, 2023, 9:34 PM IST

Updated : Jan 30, 2023, 10:44 PM IST

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಡ್ಡಲಾಗಿ ಕಾಂಪೌಂಡ್ ನಿರ್ಮಾಣ, ಗ್ರಾಮಸ್ಥರಿಂದ ಪ್ರತಿಭಟನೆ

ದೇವನಹಳ್ಳಿ: ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಅಧಿಕಾರಿಗಳು ಗ್ರಾಮಗಳ ಸಂಪರ್ಕ ರಸ್ತೆಯನ್ನ ಕಡಿತಗೊಳಿಸಲು ಹೊರಟಿರುವ ಕ್ರಮವನ್ನು ಖಂಡಿಸಿ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಪೋಲನಹಳ್ಳಿ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಚೀಮಾಚನಹಳ್ಳಿ, ನಾಗನಾಯಕನಹಳ್ಳಿ, ಪೋಲನಹಳ್ಳಿ, ಮುದ್ದೇನಹಳ್ಳಿ ಸುತ್ತಮುತ್ತ ಕೆಐಎಡಿಬಿ ಸಾವಿರಾರು ಎಕರೆ ಭೂ ಸ್ವಾಧೀನಪಡಿಸಿಕೊಂಡಿದೆ. ಅದರಂತೆ ಹಲವು ಕಂಪನಿಗಳ ಆಕರ್ಷಣೆಗೆ ಬೃಹತ್​ ರಸ್ತೆಯನ್ನ ನಿರ್ಮಾಣ ಮಾಡಿದೆ. ಇದೀಗ ಕೆಐಎಡಿಬಿ ನಿರ್ಮಾಣ ಮಾಡಿರುವ ರಸ್ತೆಯ ಪಕ್ಕದಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದೆ. ಆದರೆ ಇದೇ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್​ ನಿರ್ಮಿಸಿ ರಸ್ತೆಯ ಪಥ ಬದಲಾವಣೆ ಮಾಡಲು ಕೆಐಎಡಿಬಿ ಮುಂದಾಗಿದ್ದು, ನಾಲ್ಕು ಗ್ರಾಮಗಳ ಜನರನ್ನ ಕೆರಳಿಸಿದೆ. ಹೀಗಾಗಿ ಸೋಮವಾರದಂದು ಸ್ಥಳದಲ್ಲಿ ಪೆಂಡಲ್​ ಹಾಕಿ ರಸ್ತೆ ಬಂದ್​ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಇನ್ನು, ಚೀಮಾಚನಹಳ್ಳಿ ಗ್ರಾಮದಿಂದ ತೆರಳು ಗ್ರಾಮದ ರಸ್ತೆಯನ್ನ ಕೆಐಎಡಿಬಿ ಬಳಿ ಅಡ್ಡಪಪಡಿಸಿದರೆ, ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡು ಐದಾರು ಕಿ.ಮಿ ಸುತ್ತಿ ಬಳಸಿ ಜನ ಓಡಾಡಬೇಕಿದೆ. ನಮ್ಮ ಹಿರಿಯರು ನಿರ್ಮಿಸಿದಂತ ರಸ್ತೆ ಇದಾಗಿದ್ದು, ರೈತರು ಜಮೀನು ಮತ್ತು ತೋಟಗಳಿಗೆ ತೆರಳಲು, ರೇಷನ್​ಗಾಗಿ ಮತ್ತು ಹಾಲು ಉತ್ಪಾದನ ಸಂಘಕ್ಕೆ ಹಾಲು ವಿತರಣೆ ಮಾಡಲು, ಮಕ್ಕಳು ಶಾಲೆಗೆ ಹೋಗಲು ಈಗಿರುವ ರಸ್ತೆ ನೇರವಾಗಿದೆ. ಆದರೆ ಇದೀಗ ಕೆಲ ಉದ್ಯಮಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮಗಳಿಗೆ ಹಿಂದಿನಿಂದಲೂ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಪಥ ಬದಲಾವಣೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಜತೆಗೆ ತಾವು ಜಮೀನು ಕೊಟ್ಟಿದ್ದಲ್ಲದೆ, ಇದೀಗ ರಸ್ತೆಯನ್ನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಮಗೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ಕು ಗ್ರಾಮಗಳ ಜನರು ಕೆಐಎಡಿಬಿ ವಿರುದ್ದ ಸಿಡಿದೆದ್ದಿದ್ದಾರೆ. ಹೀಗಾಗಿ ವಿವಿಧ ಸಂಘಟನೆಗಳು ಹಾಗೂ ಗ್ರಾಮಸ್ಥರು ಪೋಲನಹಳ್ಳಿ ಬಳಿ ಪೆಂಡಲ್​ ನಿರ್ಮಿಸಿ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್​ ನಿರ್ಮಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಕೆಐಎಡಿಬಿ ಕಾಂಪೌಂಡ್​ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಈ ರೀತಿ ಕಾಂಪೌಂಡ್​ ನಿರ್ಮಿಸುವ ಮುಂಚೆ ಕೆಐಎಡಿಬಿ ಅಧಿಕಾರಿಗಳು ಆ ಭಾಗದ ರೈತರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು. ಕೆಐಎಡಿಬಿ ಈಗ ಪಥ ಬದಲಾವಣೆ ಅರ್ಜಿ ಹಾಕಿದ್ದರೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪಥ ಬದಲಾವಣೆ ಆಗದಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳನ್ನ ಸಂಪರ್ಕಿಸಿದರೆ, ಗ್ರಾಮಸ್ಥರು ಓಡಾಡಲೆಂದು ಬದಲಿ ಬೃಹತ್​ ರಸ್ತೆ ನಿರ್ಮಾಣ ಮಾಡಿದ್ದೇವೆ. ಸ್ವಲ್ಪ ಸುತ್ತಿ ಬಳಸಿಕೊಂಡು ಗ್ರಾಮಗಳಿಗೆ ತೆರಳಬಹುದು ಎಂದು ಉತ್ತರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದನ್ನೂ ಓದಿ :ಪೆಡಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ ಇಂದು ಕ್ಯಾಬ್ ಕಂಪನಿ ಓನರ್: ಬಿಹಾರ ಯುವಕನ ಯಶೋಗಾಥೆ

Last Updated : Jan 30, 2023, 10:44 PM IST

ABOUT THE AUTHOR

...view details