ಆನೇಕಲ್: ಮೂವರು ಸದಸ್ಯರನ್ನು ವಜಾಗೊಳಿಸಿದ ನಂತರ ಇಂದು ನಡೆದ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಚುನಾವಣೆಯಲ್ಲಿಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ರೆಡ್ಡಿ ಜಯಗಳಿಸಿದ್ದಾರೆ.
ಮಗುವಿನ ಕೈಯಲ್ಲಿ ಲಾಟರಿ ಎತ್ತಿಸಿ ಗೆದ್ದ ಕಾಂಗ್ರೆಸ್ -
ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಹಾಕಿ,ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾರಣಕ್ಕೆ ಉಪಾಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರನ್ನು ವಜಾಗೊಳಿಸಲಾಗಿತ್ತು.
ಕೆಲ ದಿನಗಳ ಹಿಂದೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು. ಈ ಘಟನೆ ಕುರಿತು ಧೀರ್ಘ ವಿಚಾರಣೆ ನಡೆಸಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿಯವರು, ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆ, ಮೂವರು ಸದಸ್ಯರ ಅಧಿಕಾರವನ್ನು ವಜಾಗೊಳಿಸಿದ್ದಾರೆ. ಹೀಗಾಗಿ ಸದಸ್ಯರಾದ ಶುಭ ಶ್ರೀಧರ್, ಗೌರಮ್ಮ ಹರೀಶ್, ಹಾಗೂ ಜ್ಯೋತಿ ವೆಂಕಟಸ್ವಾಮಿರೆಡ್ಡಿ ಈ ಮೂವರು ಸದಸ್ಯರು ಸದಸ್ಯತ್ವ ಕಳೆದುಕೊಂಡಿದ್ದರು.
ಇದರಿಂದ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ 16 ಸದಸ್ಯರ ಉಪಸ್ಥಿತಿಯಲ್ಲಿ ಚುನಾವಣಾ ಅಧಿಕಾರಿಗಳು ಚುನಾವಣೆ ನಡೆಸಿದ್ದರು. ಅದರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸಮಬಲ ಮತ ಪಡೆದಿದ್ದರು, ನಂತರ ಸದಸ್ಯರುಗಳ ಒಪ್ಪಿಗೆ ಮೇರೆಗೆ ಲಾಟರಿ ಮೂಲಕ ಬಾಲಕನ ಕೈಯಿಂದ ಚೀಟಿ ಎತ್ತಿಸಲಾಯಿತು. ಈ ವೇಳೆ ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ರೆಡ್ಡಿ ಜಯಗಳಿಸಿದ್ದಾರೆ.