ಹೊಸಕೋಟೆ:ಕಾಂಗ್ರೆಸ್ಗೆ ಕೈ ಕೊಟ್ಟ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಬೆಂಕಿಯಂತಹ ಮಾತು. ನಾಗರಾಜ್ ಸ್ವ ಕ್ಷೇತ್ರದಲ್ಲೇ ಕೈ ನಾಯಕರಿಂದ ರಣವೀಳ್ಯ. ಸ್ವಾಭಿಮಾನಿ ಸಮಾವೇಶದ ಮೂಲಕವೇ ಉಪ ಚುನಾವಣೆಗೆ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು.
ಎಂಟಿಬಿ ನಾಗರಾಜ್ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು - ಕಾಂಗ್ರೆಸ್ ನಾಯಕರು
ಹೊಸಕೋಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ವಿರುದ್ಧ ಸಿಡಿದೆದ್ದರು.
ಹೊಸಕೋಟೆಯಲ್ಲಿ ನಡೆದ ಕೈ ಕಾರ್ಯಕರ್ತರ ಸ್ವಾಭಿಮಾನಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಎಂಟಿಬಿ ನಾಗರಾಜ್ ವಿರುದ್ಧ ಸಿಡಿದೆದ್ದರು. ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿ ಸೇರುತ್ತಿರುವ ನಾಗರಾಜ್ ವಿರುದ್ಧ ಕೈ ಘಟಾನುಘಟಿ ನಾಯಕರು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡ್ರು.
ನನ್ನ ಎದೆ ಸೀಳಿದ್ರೆ ಸಿದ್ದರಾಮಯ್ಯ ಕಾಣಿಸುತ್ತಾರೆ ಎಂದು ಹೇಳಿದ್ದ ಎಂಟಿಬಿ ಈಗ ತೆಗೆದಾಕಿದ್ದೀನಿ ಎಂದಿದ್ರು. ಇದಕ್ಕೆ ನಯವಾಗಿಯೇ ಉತ್ತರ ಕೊಟ್ಟ ಸಿದ್ದರಾಮಯ್ಯ ಎದೆಯಲ್ಲಿ ಇಟ್ಕೊ ಅಂತಾನು ಹೇಳಿಲ್ಲ. ತೆಗದಾಕು ಅಂತಾನು ಹೇಳಿಲ್ಲ ಎಂದು ತಿರುಗೇಟು ಕೊಟ್ರು.
ಸಮಾವೇಶಕ್ಕೂ ಮುನ್ನ ಬೀದಿಗಿಳಿದಿದ್ದ ಕೈ ಮದಗಜಗಳು ಕಾಂಗ್ರೆಸ್ಗೆ ಎಂಟಿಬಿ ದ್ರೋಹ ಬಗೆದಿದ್ದಾರೆ. ಅವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಘೋಷಣೆ ಕೂಗುತ್ತಾ ಹೊಸಕೋಟೆ ಐಬಿಯಿಂದ ಸ್ವಾಭಿಮಾನಿ ಸಮಾವೇಶ ವೇದಿಕೆವರೆಗೂ ಬೃಹತ್ ಮೆರವಣಿಗೆ ನಡೆಸಿದರು.