ಕರ್ನಾಟಕ

karnataka

ETV Bharat / state

ಲೋಕಲ್​ ಫಲಿತಾಂಶ... ಕಾಂಗ್ರೆಸ್ ಕಾರ್ಯಕರ್ತರಿಂದ ಗೂಂಡಾಗಿರಿ ಆರೋಪ - ಚುನಾವಣೆ

ಕಾಂಗ್ರೆಸ್​ ಮುಖಂಡ ಮಧು ಸಂಪತ್ ಎಂಬುವವರು ಕಾರಿನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಿಂದ ಗೂಂಡಾಗಿರಿ ಆರೋಪ

By

Published : Jun 1, 2019, 1:00 PM IST

ಆನೇಕಲ್: ಆನೇಕಲ್ ಪುರಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬ ಗೆದ್ದ ಅಭ್ಯರ್ಥಿಯ ಸಹೋದರನಿಗೆ ಧಮ್ಕಿ ಹಾಕಿ ಹಲ್ಲೆ‌ಮಾಡಿರುವ ಘಟನೆ ವಾರ್ಡ್ ನಂಬರ್ 10 ರಲ್ಲಿ ನಡೆದಿದೆ.

ಆನೇಕಲ್ ಪುರಸಭೆ ಚುನಾವಣೆ ಫಲಿತಾಂಶ ಬಂದ ಮೇಲೆ ಬಿಜೆಪಿ ಅಭ್ಯರ್ಥಿ ಕಲಾವತಿ ಮುನಿರಾಜು ಗೆಲುವನ್ನು ಸಾಧಿಸಿದ್ದರು. ಹೀಗಾಗಿ ವಾರ್ಡ್​ನಲ್ಲಿ ಗೆಲುವಿನ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರಿಂದ ಗೂಂಡಾಗಿರಿ ಆರೋಪ

ಬಳಿಕ ಕಲಾವತಿಯ ಸಹೋದರ ಬೈಕ್​ನಲ್ಲಿ ಹೋಗುವಾಗ ಕಾಂಗ್ರೆಸ್​ ಮುಖಂಡ ಮಧು ಸಂಪತ್ ಎಂಬುವವರು ಕಾರಿನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆದರಿಕೆಗೆ ಒಳಗಾಗಿದ್ದ ವ್ಯಕ್ತಿ ಬಿಜೆಪಿ ಕಾರ್ಯಕರ್ತರ ಗಮನಕ್ಕೆ ತಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಜಮಾವಣೆಗೊಂಡು ನಡೆದ ಸನ್ನಿವೇಶವನ್ನು ಪೊಲೀಸ್ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ABOUT THE AUTHOR

...view details