ಕರ್ನಾಟಕ

karnataka

ETV Bharat / state

ಆಪರೇಷನ್ ಕಮಲ ಭೀತಿ ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್.. - ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ ಶಿಫ್ಟ್, ಆಪರೇಶನ್ ಕಮಲ ಭೀತಿ, ಕಾಂಗ್ರೆಸ್  ನಾಯಕರು ಸೂಚನೆ, ದೇವನಹಳ್ಳಿ, ಖಾಸಗಿ ಬಸ್ ನಲ್ಲಿ ಪ್ರಯಾಣ, ಬೆಂಗಳೂರು, ಕಾಂಗ್ರೆಸ್ ಹೈಕಮಾಂಡ್, ಪ್ರಕೃತಿ ರೆಸಾರ್ಟ್ , ಈ ಟಿವಿ ಭಾರತ

ನಗರದ ಹೋಟೆಲ್‌ನಲ್ಲಿ ವಾಸ್ತವ್ಯವಿದ್ದ ಶಾಸಕರು ವೈಯುಕ್ತಿಕ ಕಾರಣಗಳನ್ನು ನೀಡಿ ಹೋಟೆಲ್‌ನಿಂದ ಆಗಾಗ ಹೊರ ಹೋಗುತ್ತಿದ್ದರು. ಇನ್ನು ಕೆಲ ಶಾಸಕರು ಅಧಿವೇಶನದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೋಟೆಲ್‌ನಿಂದ ಹೊರ ಹೋದಾಗ ಎಲ್ಲಿ ತಮ್ಮ ಶಾಸಕರು ಅಪರೇಷನ್ ಕಮಲಕ್ಕೆ ಬಲಿಯಾಗುತ್ತಾರೋ ಎಂದು ಹೆದರಿದ ಕಾಂಗ್ರೆಸ್ ನಾಯಕರು ತಮ್ಮ ಶಾಸಕರನ್ನು ನಗರದ ಹೊರವಲಯದ ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ.

ರೆಸಾರ್ಟ್ ನತ್ತ ತೆರಳಿದ ಕೈ ಶಾಸಕರು

By

Published : Jul 16, 2019, 4:58 PM IST

ಬೆಂಗಳೂರು: ಅಪರೇಷನ್ ಕಮಲಕ್ಕೆ ಸಿಲುಕಿ ಎಲ್ಲಿ ಶಾಸಕರು ಕೈತಪ್ಪಿ ಹೋಗುತ್ತಾರೋ ಎಂದು ಭಯಗೊಂಡಿರುವ ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರನ್ನು ನಗರದ ಹೊರವಲಯದ ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ.

ಈವರೆಗೆ ನಗರದ ತಾಜ್ ವಿವಾಂತ್ ಹೋಟೆಲ್‌ನಲ್ಲಿ ಕೈ ಶಾಸಕರು ವಾಸ್ತವ್ಯ ಹೂಡಿದ್ದರು. ಆದರೆ, ಹಲವಾರು ಶಾಸಕರು ವೈಯುಕ್ತಿಕ ಕಾರಣಗಳನ್ನು ನೀಡಿ ಹೋಟೆಲ್‌ನಿಂದ ಆಗಾಗ ಹೊರ ಹೋಗುತ್ತಿದ್ದರು. ಇನ್ನು ಕೆಲವರು ಅಧಿವೇಶನದ ಬಳಿಕ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಹೋಟೆಲ್‌ನಿಂದ ಹೊರ ಹೋದಾಗ ಎಲ್ಲಿ ತಮ್ಮ ಶಾಸಕರು ಅಪರೇಷನ್ ಕಮಲಕ್ಕೆ ಬಲಿಯಾಗುತ್ತಾರೋ ಎಂದು ಹೆದರಿದ ಕಾಂಗ್ರೆಸ್ ನಾಯಕರು, ಎಲ್ಲಾ ಶಾಸಕರನ್ನು ದೇವನಹಳ್ಳಿಯ ಪ್ರಕೃತಿ ರೆಸಾರ್ಟ್‌ಗೆ ಶಿಫ್ಟ್ ಮಾಡಿದ್ದಾರೆ.ಅಲ್ಲದೇ ನಗರದಿಂದ ಹೊರಗೆ ಇರುವ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡುವುದರಿಂದ ಹೊರಗಡೆಯ ಸಂಪರ್ಕ ಇಲ್ಲದೆ ಒಗ್ಗಟ್ಟಾಗಿ ಇರಬಹುದು ಅನ್ನೋದು ಕೈ ನಾಯಕ ಉದ್ದೇಶವಾಗಿದೆ.

ರೆಸಾರ್ಟ್‌ನತ್ತ ತೆರಳಿದ ಕಾಂಗ್ರೆಸ್‌ ಶಾಸಕರು..

ಆದ್ದರಿಂದ ಪೊಲೀಸ್ ಭದ್ರತೆಯೊಂದಿಗೆ ಇಂದು ಮಧ್ಯಾಹ್ನ ಪ್ರಕೃತಿ ರೆಸಾರ್ಟ್‌ಗೆ ಖಾಸಗಿ ಬಸ್‌ನಲ್ಲಿ ಶಾಸಕರು ಆಗಮಿಸಿದರು. ಈಗಾಗಲೇ ಕೈ ಶಾಸಕರ ವಾಸ್ತವ್ಯಕ್ಕೆ ಪ್ರಕೃತಿ ರೆಸಾರ್ಟ್‌ನಲ್ಲಿ ಎಲ್ಲಾ ಸಿದ್ದತೆಗಳು ನಡೆದಿವೆ.

For All Latest Updates

TAGGED:

ABOUT THE AUTHOR

...view details