ಕರ್ನಾಟಕ

karnataka

By

Published : Dec 24, 2019, 7:50 PM IST

ETV Bharat / state

ಪೌರತ್ವ ಕಾಯ್ದೆಯಿಂದ ಯಾವುದೇ ಧರ್ಮದ ಜನರಿಗೆ ತೊಂದರೆಯಿಲ್ಲ: ರವಿ ಡಿ ಚನ್ನಣ್ಣನವರ್

ಭಾರತೀಯ ಸಂವಿಧಾನದಲ್ಲಿನ ಪೌರತ್ವ ಕಾಯ್ದೆಯನ್ನ ಉಳಿಸಿಕೊಂಡು ಈಗಿನ ಕಾಯ್ದೆ ಪೌರತ್ವ ತಿದ್ದುಪಡಿ -2019 ನ್ನು ರೂಪಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್​ಪಿ ರವಿ ಡಿ ಚನ್ನಣ್ಣವರ್ ಹೇಳಿದ್ದಾರೆ.

rerrf
ರವಿ ಡಿ ಚನ್ನಣ್ಣವರ್

ದೊಡ್ಡಬಳ್ಳಾಪುರ : ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಧರ್ಮದ ಜನಕ್ಕೆ ತೊಂದರೆಯಾಗುವುದಿಲ್ಲ. ಒಂದು ವೇಳೆ ತೊಂದರೆಯಾದ್ದಲ್ಲಿ ನನ್ನ ಬಳಿಗೆ ಬನ್ನಿ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣವರ್ ಹೇಳಿದ್ದಾರೆ.

ರವಿ ಡಿ ಚನ್ನಣ್ಣವರ್

ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಎಸ್ಪಿ ರವಿ ಡಿ ಚನ್ನಣ್ಣವರ್ , ಪೌರತ್ವ ತಿದ್ದುಪಡಿ ಕಾಯ್ದೆ - 2019 ಕುರಿತಂತೆ ಗಾಳಿ ಸುದ್ದಿಗಳು ಹರಡಿದ್ದು. ಅಂತಹ ಸುದ್ದಿಗಳಿಗೆ ಕಿವಿಕೊಡಬಾರದು. ಭಾರತೀಯರಿಗೆ ಸಂವಿಧಾನವೇ ಹೋಲಿ ಬುಕ್​, ಭಾರತದ ಸಂವಿಧಾನದ ಎದುರು ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.

ದೇಶದಲ್ಲಿ ನೆಲೆಸಿರುವ ಯಾವುದೇ ಧರ್ಮದವರ ಷೌರತ್ವವನ್ನು ಈ ಕಾಯ್ದೆ ಕಸಿದುಕೊಳ್ಳುವುದಿಲ್ಲ. ಅಸ್ಸಾಂನಲ್ಲಿ ನಡೆಯುತ್ತಿರುವ ಸಮಸ್ಯೆ ಮುಂದಿಟ್ಪುಕೊಂಡು ನಾವ್ಯಾಕೆ ಇಲ್ಲಿ ಬೆಂಕಿ ಇಡುವ ಕೆಲಸ ಮಾಡ್ಬೇಕು ಎಂದರು. ಜಾಲತಾಣಗಳಲ್ಲಿ ಬರುವ ಮಾಹಿತಿ ನಂಬಿ ತೊಂದರೆಗೆ ಸಿಲುಕ ಬೇಡಿ ಎಂದು ಯುವಕರಿಗೆ ಮನವಿಯನ್ನೂ ಸಹ ಮಾಡಿದರು.



ABOUT THE AUTHOR

...view details