ಕರ್ನಾಟಕ

karnataka

ETV Bharat / state

ಎಂಟಿಬಿ ಬರುವ ಮುನ್ನ ಹೊಸಕೋಟೆ ಮಿನಿ ಬಿಹಾರವಾಗಿತ್ತು : ಚಿ.ನಾ.ರಾಮು - ಹೊಸಕೋಟೆಯಲ್ಲಿ ಚಿ.ನಾ.ರಾಮು ಹೇಳಿಕೆ

ಹೊಸಕೋಟೆ ನಗರದ ಬಿಜೆಪಿ ಕಚೇರಿಯಲ್ಲಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.

CNRamu statement in hosakote,ಹೊಸಕೋಟೆಯಲ್ಲಿ ಚಿ.ನಾ.ರಾಮು ಹೇಳಿಕೆ
ಚಿ.ನಾ.ರಾಮುಹೇಳಿಕೆ

By

Published : Dec 2, 2019, 11:49 PM IST

ಹೊಸಕೋಟೆ: ನಗರದ ಬಿಜೆಪಿ ಕಚೇರಿಯಲ್ಲಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.

ಚಿ.ನಾ.ರಾಮು ಹೇಳಿಕೆ

ಹೊಸಕೋಟೆಯಲ್ಲಿ ನಾನು ಪ್ರವಾಸ ಮಾಡಿದ್ದೇನೆ. ಎಂಟಿಬಿ ನಾಗರಾಜು ಬರುವ ಮುನ್ನ ಇದು ಮಿನಿ ಬಿಹಾರ ಆಗಿತ್ತು. ಎಂಟಿಬಿ ಬಂದ ಮೇಲೆ ಶಾಂತಿ ನೆಲೆಸಿದೆ. ಹೀಗಾಗಿ ನಾವು ಅವರನ್ನ ಗೆಲ್ಲಿಸುತ್ತೇವೆ. ಆದ್ರೆ ಕ್ಷೇತ್ರದಲ್ಲಿ ಸ್ವಲ್ಪ ಭಯದ ವಾತಾವರಣ ಇದೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೆಲವರನ್ನ ಬೆದರಿಸುವ ಕೆಲಸ ಆಗುತ್ತಿದೆ. ಆದರೆ ಬಿಜೆಪಿ ಇಲ್ಲಿ ಗೆಲ್ಲುತ್ತೆ ಯಾವುದೇ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details