ಕರ್ನಾಟಕ

karnataka

ETV Bharat / state

‌ಮೋದಿ, ಅಮಿತ್ ಶಾಗೆ ಅಧಿಕಾರ‌ ನಡೆಸೋ ಅನುಭವವಿಲ್ಲ : ‌ಸಿಎಂ ಇಬ್ರಾಹಿಂ ಆಕ್ರೋಶ! - cm ibrahim latest news

ಮೋದಿ, ಅಮಿತ್ ಶಾಗೆ ಅಧಿಕಾರ‌ ನಡೆಸೋ ಅನುಭವವಿಲ್ಲ. ಇದರಿಂದಾಗಿಯೇ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವವಾಗಿವೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಘಟನೆ ಕುರಿತು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ.

CM Ibrahim
ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ

By

Published : Dec 20, 2019, 4:27 PM IST

ದೇವನಹಳ್ಳಿ :ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್​ನಲ್ಲಿ ಇಬ್ಬರು ಸಾವನ್ನಪ್ಪಿದ ಹಿನ್ನಲೆ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಮಂಗಳೂರಿಗೆ ಪ್ರಯಾಣ ಬೆಳೆಸಿದರು.

‌ಮೋದಿ, ಅಮಿತ್ ಶಾಗೆ ಅಧಿಕಾರ‌ ನಡೆಸೋ ಅನುಭವವಿಲ್ಲ : ‌ಸಿಎಂ ಇಬ್ರಾಹಿಂ ಆಕ್ರೋಶ!

ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಇಬ್ರಾಹಿಂ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಮಿತ್ ಶಾ ಮಾಡುತ್ತಿರೋದು ಏನು? ಇಷ್ಟು ವರ್ಷಗಳಿಂದ ‌ಭಾರತ ದೇಶದಲ್ಲಿ‌ ನಾವೆಲ್ಲ ಬದುಕಿ ಬಾಳಿದ್ದೇವೆ. ‌ಮೋದಿ, ಅಮಿತ್ ಶಾಗೆ ಅಧಿಕಾರ‌ ನಡೆಸೋ ಅನುಭವವಿಲ್ಲ. ಇದರಿಂದಾಗಿಯೇ ಇಷ್ಟೆಲ್ಲಾ ಸಮಸ್ಯೆಗಳು ಉದ್ಭವವಾಗಿವೆ. ಕೊಡಲೇ ಕೇಂದ್ರ ಸರ್ಕಾರ ಎಲ್ಲರನ್ನೂ ಕರೆದು ಮಾತುಕತೆ ನಡೆಸಬೇಕೆಂದು ಹೇಳಿದರು.

ಮಂಗಳೂರಿನ ಫೈರಿಂಗ್ ಪ್ರಕರಣದಲ್ಲಿ ಎರಡು ಅಮೂಲ್ಯ ಜೀವಗಳು ಸಾವನಪ್ಪಿದ್ದು, ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ‌ಆಗ್ರಹಿಸಿದರು. ಜೊತೆಗೆ ಮುಖ್ಯಮಂತ್ರಿಯವರು ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details