ಕರ್ನಾಟಕ

karnataka

ETV Bharat / state

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್​ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ - CM Bommai wishes to Bhupendra Patel

ಬೆಂಗಳೂರಿನಿಂದ ಮುಖ್ಯಮಂತ್ರಿಗಳೊಂದಿಗೆ ತೆರಳಿದ್ದ ಸಚಿವ ಆರ್. ಅಶೋಕ್, ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್ ಅವರೂ ಕೂಡ ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಿದ್ದಾರೆ..

cm-basavaraja-bommai-wishes-to-bhupendra-patel
ಸಿಎಂ ಭೂಪೇಂದ್ರ ಪಟೇಲ್​ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ

By

Published : Sep 13, 2021, 5:23 PM IST

ಬೆಂಗಳೂರು :ಗುಜರಾತ್​ನ 17ನೇ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರಿಗೆ‌ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭ ಕೋರಿದರು.

ಗಾಂಧಿನಗರದ ರಾಜಭವನದಲ್ಲಿ ನೂತನ ಸಿಎಂ ಪಟೇಲ್ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡಿದರು. ವಿಶೇಷ ವಿಮಾನದ ಮೂಲಕ ಗಾಂಧಿನಗರಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸುವಂತೆ ಶುಭ ಕೋರಿದರು.

ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್​ಗೆ ಶುಭ ಕೋರಿದ ಬಸವರಾಜ ಬೊಮ್ಮಾಯಿ

ಬೆಂಗಳೂರಿನಿಂದ ಮುಖ್ಯಮಂತ್ರಿಗಳೊಂದಿಗೆ ತೆರಳಿದ್ದ ಸಚಿವ ಆರ್. ಅಶೋಕ್, ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್ ಅವರೂ ಕೂಡ ನೂತನ ಮುಖ್ಯಮಂತ್ರಿಗೆ ಶುಭಾಶಯ ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್​ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್​ ಅವರನ್ನು ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದರು.

ಓದಿ:5 ಬಾರಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆ, ಕೃಷಿಯಲ್ಲೂ ಎತ್ತಿದ 'ಕೈ': ಇಲ್ಲಿದೆ ಆಸ್ಕರ್ ಫರ್ನಾಂಡಿಸ್ ಜೀವನ ಚಿತ್ರಣ

ABOUT THE AUTHOR

...view details