ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ತಮ್ಮ ಪುತ್ರನ ಒಡೆತನದ ಮ್ಯಾಗ್ನೆಟಿಕ್ ಫೋಟೋ ಕಂಪನಿಯ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ಫ್ಯಾಕ್ಟರಿಯಲ್ಲಿನ ಯಂತ್ರಗಳಿಗೆ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದರು. ಈ ವೇಳೆ ಪತ್ನಿ ಚೆನ್ನಮ್ಮ, ಪುತ್ರ ಭರತ್ ಹಾಗೂ ಪುತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಸಿಎಂ ಜೊತೆ ಪೂಜೆಯಲ್ಲಿ ಭಾಗವಹಿಸಿದರು.