ನೆಲಮಂಗಲ : ಗಂಡ ಹೆಂಡತಿಯ ವಿರಸದಿಂದ ಬೇಸತ್ತ ಪತ್ನಿ ತನ್ನಿಬ್ಬರು ಹೆಣ್ಣು ಮಕ್ಕಳ ಜೊತೆ ನಾಪತ್ತೆಯಾದ ಘಟನೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಹೊಸ ಕಾಲೊನಿಯಲ್ಲಿ ನಡೆದಿದೆ.
ಹೊಸ ಕಾಲೊನಿ ನಿವಾಸಿ ಅನಿಲ್ ಕುಮಾರ್ ಪತ್ನಿ ಪುಷ್ಪ (28) ಮಕ್ಕಳಾದ ಭೂಮಿಕಾ (7) ಮತ್ತು ನಾಗಶ್ರೀ (6) ಕಾಣೆಯಾದವರು.
ಜುಲೈ 27ರಂದು ಮನೆಯಿಂದ ಹೊರ ಹೋದ ಇವರು ಇದುವರೆಗೂ ಪತ್ತೆಯಾಗಿಲ್ಲ. ತಾಯಿ ಮಕ್ಕಳ ನಾಪತ್ತೆಗೆ ಪತಿ ಅನಿಲ್ ಕುಮಾರ್ ಮತ್ತು ಪತ್ನಿ ಪುಷ್ಪ ನಡುವಿನ ವಿರಸವೇ ಕಾರಣ ಎಂದು ಹೇಳಲಾಗುತ್ತಿದೆ.