ನೆಲಮಂಗಲ:ಕಮರ್ಷಿಯಲ್ ಕಾರುಗಳ ಮೇಲೆ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಯೆಲ್ಲೋ ಎಕ್ಸ್‌ಪ್ರೆಸ್‌ನಲ್ಲಿ ಹಗರಣ ನಡೆದಿರುವ ದೂರು ಬಂದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಜಕ್ಕಸಂದ್ರ ರಸ್ತೆಯಲ್ಲಿರುವ ಯೆಲ್ಲೋ ಎಕ್ಸ್‌ಪ್ರೆಸ್ ಮೇಲೆ ದಾಳಿ ನಡೆಸಿದ್ದಾರೆ.
ನೆಲಮಂಗಲ ಪಟ್ಟಣದ ಜಕ್ಕಸಂದ್ರ ರಸ್ತೆಯಲ್ಲಿರುವ ಯೆಲ್ಲೋ ಎಕ್ಸ್‌ಪ್ರೆಸ್ ಸಂಸ್ಥೆ ಸಾರ್ವಜನಿಕರಿಂದ ಬಂಡವಾಳ ಹೂಡಿಕೆ ಮಾಡಿಸಿಕೊಳ್ಳುತ್ತಿತ್ತು. ಕಮರ್ಷಿಯಲ್ ಕಾರುಗಳ ಮೇಲೆ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಯೆಲ್ಲೋ ಎಕ್ಸ್‌ಪ್ರೆಸ್ ಕಂಪನಿ ಒಂದು ಕಾರಿಗೆ ₹2ಲಕ್ಷ ಹೂಡಿಕೆಯನ್ನ ಜನರಿಂದ ಮಾಡಿಸಿಕೊಳ್ಳುತ್ತಿತ್ತು. ಈಗಾಗಲೇ 2 ಸಾವಿರ ಜನ ಹಣ ಹೂಡಿಕೆ ಮಾಡಿದ್ದು, ಲಾಭದ ರೂಪದಲ್ಲಿ ತಿಂಗಳಿಗೆ ₹10 ಸಾವಿರ ಹಣ ನೀಡುವ ಪ್ಲಾನ್ ಯೆಲ್ಲೋ ಎಕ್ಸ್ಪ್ರೆಸ್ನದ್ದಾಗಿತ್ತು. ಆದರೆ, ಈವರೆಗೂ 200 ಕಾರುಗಳನ್ನು ಮಾತ್ರ ಯೆಲ್ಲೋ ಎಕ್ಸ್‌ಪ್ರೆಸ್ ಖರೀದಿ ಮಾಡಿತ್ತು. ಈ ಬಗ್ಗೆ ದೂರು ದಾಖಲಾಗಿದ್ದರಿಂದ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ.