ಕರ್ನಾಟಕ

karnataka

ETV Bharat / state

ಇವರು ಚಿಕ್ಕಬಳ್ಳಾಪುರ ಕ್ಷೇತ್ರ ಕಣದಲ್ಲಿನ ಕೋಟ್ಯಾಧಿಪತಿಗಳು.. - undefined

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಅವರ ಆಸ್ತಿ ವಿವರ ಇಂತಿದೆ.

ವೀರಪ್ಪ ಮೋಯ್ಲಿ,ಬಿ.ಎನ್.ಬಚ್ಚೇಗೌಡ

By

Published : Apr 3, 2019, 7:12 PM IST

ಬೆಂಗಳೂರು :ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದ್ದು, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಾದ ಇಬ್ಬರೂ ಕೋಟ್ಯಾಧಿಶರುಗಳು.ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಬಳಿ 1,40,579 ನಗದು ಸೇರಿದಂತೆ 2,27,966 ರೂಪಾಯಿ ಮೌಲ್ಯದ ಚರಾಸ್ಥಿ ಹಾಗೂ ಹೆಂಡತಿ ಹೆಸರಲ್ಲಿ 5,55,32,918 ರೂ. ಮೌಲ್ಯದ ಚರಾಸ್ಥಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಮೊಯ್ಲಿ ಆಸ್ತಿ ವಿವರ

ವೀರಪ್ಪ ಮೊಯ್ಲಿ ಹೆಸರಲ್ಲಿ ಸ್ಥಿರಾಸ್ಥಿಯೇ ಇಲ್ವಂತೆ :
ಜೊತೆಗೆ ಮಾಜಿ ಸಿಎಂ ಹೆಂಡತಿ ಹೆಸರಿನಲ್ಲಿ 10,55,85,000,ರೂಪಾಯಿ ಮೌಲ್ಯದ ಸ್ಥಿರಾಸ್ಥಿಯಿದ್ದು, ಮೊಯ್ಲಿ ಹೆಸರಿನಲ್ಲಿ ಒಂದೂವರೆ ಕೋಟಿ, ಹೆಂಡತಿ ಹೆಸರಲ್ಲಿ 8 ಕೋಟಿ 91 ಲಕ್ಷ ಸಾಲವಿದೆ. ವೀರಪ್ಪ ಮೊಯ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ಧಾರೆ.

ವೀರಪ್ಪ ಮೊಯ್ಲಿ ಆಸ್ತಿ ವಿವರ

ಬಿ.ಎನ್.ಬಚ್ಚೇಗೌಡ ಆಸ್ತಿ ವಿವರ :
ಬಿ.ಎನ್.ಬಚ್ಚೇಗೌಡ ಹೆಸರಿನಲ್ಲಿ₹10 ಲಕ್ಷ, ಹೆಂಡತಿ ಹೆಸರಿನಲ್ಲಿ 5 ಲಕ್ಷ ರೂ. ನಗದು ಸೇರಿ ಮಾಜಿ ಸಚಿವರು 60,60,234 ರೂ. ಮೌಲ್ಯದ ಚರಾಸ್ಥಿ ಹಾಗೂ ಹೆಂಡತಿ ಉಮಾಗೌಡ ಹೆಸ್ರಲ್ಲಿ 7,74,40,907 ರೂ. ಚರಾಸ್ಥಿಯಿದೆ ಎಂದು ಆಸ್ತಿ ವಿವರ ಸಲ್ಲಿಸಿದ್ದಾರೆ. ಇನ್ನು ಗೌಡ್ರ ಸ್ಥಿರಾಸ್ಥಿ ಮೌಲ್ಯ 83 ಕೋಟಿಯಾದ್ರೇ, ಅವರ ಹೆಂಡತಿ ಹೆಸರಿನಲ್ಲಿ 24 ಕೋಟಿ ಮೌಲ್ಯದ ಆಸ್ತಿಯಿದೆ. ಇವರು ಯಾವುದೇ ರೀತಿಯ ಸಾಲ ಮಾಡಿಕೊಂಡಿಲ್ಲ.

For All Latest Updates

TAGGED:

ABOUT THE AUTHOR

...view details