ಕರ್ನಾಟಕ

karnataka

ETV Bharat / state

ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫ್ಯೂ ಎಫೆಕ್ಟ್​: ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆ ಜನರಿಗೆ ಮಾಂಸದ್ದೇ ಚಿಂತೆ - ಕೊರೊನಾ ಅಪ್ಡೇಟ್‌

ದೇಶಾದ್ಯಂತ ಹೆಚ್ಚುತ್ತಿರುವ ಕೊರೊನಾ ಭೀತಿ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿ ಮಾಂಸದಂಗಡಿಗಳನ್ನು ತೆರೆಯಲಾಗಿದೆ.

Chicken shop open in Chikkaballapura
ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫೂ ಭೀತಿ

By

Published : Mar 22, 2020, 12:05 PM IST

Updated : Mar 22, 2020, 12:16 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೊಂಕು ಪತ್ತೆಯಾದ ಹಿನ್ನೆಲೆ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದ್ದರು ಮಾಂಸದ ಅಂಗಡಿಗಳು ತೆರೆದಿವೆ.

ಮಾಂಸದ ಅಂಗಡಿಗಳಿಗೆ ತಟ್ಟದ ಕರ್ಫೂ ಭೀತಿ

ಜಿಲ್ಲೆಯ ಟಿಪ್ಪು ನಗರ, ಕೊಡದವಾಡಿ, ಗೋಪಸಂದ್ರ ಸೇರಿದಂತೆ ಹಲವೆಡೆ ಮಾಂಸದಂಗಡಿಗಳು ತೆರೆದಿದ್ದು, ಮಾಂಸಕ್ಕಾಗಿ ಜನತೆ ಕ್ಯೂ ನಿಂತಿದ್ದಾರೆ. ಕೊಡದವಾಡಿ ಗ್ರಾಮದ ರಸ್ತೆ ಪಕ್ಕದಲ್ಲೇ ಬೆಳಗ್ಗೆ 4 ರಿಂದ ಮಾಂಸದಂಗಡಿ ತೆರೆದಿವೆ.

ಈಗಾಗಲೇ ಜಿಲ್ಲೆಯ ಗೌರಿಬಿದನೂರು, ಶಿಡ್ಲಘಟ್ಟ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ ಸಾರ್ವಜನಿಕರು ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ಇತ್ತ ಮಾಂಸದಂಗಡಿಗಳನ್ನು ತೆರೆದು ಸರ್ಕಾರದ ಆದೇಶವನ್ನು ಉಂಲಘಿಸಿದ್ದಾರೆ.

Last Updated : Mar 22, 2020, 12:16 PM IST

ABOUT THE AUTHOR

...view details