ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಚಿರತೆ ದಾಳಿಗೆ 3 ಮೇಕೆ 1 ಕುರಿಮರಿ ಬಲಿ!

ಮಾಕಳಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ತೋಟದ ಮನೆಯ ಮೇಲೆ ದಾಳಿ ನಡೆಸಿರುವ ಚಿರತೆ 3 ಮೇಕೆ, 1 ಕುರಿಮರಿಯನ್ನು ಬಲಿ ತೆಗೆದುಕೊಂಡಿದೆ.

cheetah attack on farmhouse; 4 sheep died
ದೊಡ್ಡಬಳ್ಳಾಪುರ: ಚಿರತೆ ದಾಳಿಗೆ 3 ಮೇಕೆ 1 ಕುರಿಮರಿ ಬಲಿ!

By

Published : Jan 8, 2021, 8:36 AM IST

ದೊಡ್ಡಬಳ್ಳಾಪುರ: ಮಾಕಳಿ ಬೆಟ್ಟದ ತಪ್ಪಲಿನ ಗ್ರಾಮಸ್ಥರಿಗೆ ಚಿರತೆ ಕಾಟ ಹೆಚ್ಚಾಗಿದ್ದು, ಆತಂಕವನ್ನುಂಟುಮಾಡಿದೆ. ನಿನ್ನೆ ರಾತ್ರಿ ತೋಟದ ಮನೆಯ ಮೇಲೆ ದಾಳಿ ನಡೆಸಿರುವ ಚಿರತೆ 3 ಮೇಕೆ, 1 ಕುರಿಮರಿಯನ್ನು ಬಲಿ ತೆಗೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ:ರಾಜ್ಯ, ದೇಶಾದ್ಯಂತ ಇಂದು ಕೊರೊನಾ ಲಸಿಕೆ ಡ್ರೈ ರನ್‌

ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿಬೆಟ್ಟದ ತಪ್ಪಲಿನಲ್ಲಿರುವ ಸೊಣ್ಣಹಳ್ಳಿಯ ಉಮೇಶ್ ಎಂಬುವರ ತೋಟದ ಮನೆಯ ಮೇಲೆ ಚಿರತೆ ದಾಳಿ ನಡೆಸಿದೆ. ನಿನ್ನೆ ಸಂಜೆ ತೋಟದ ಮನೆಯಲ್ಲಿ ಹಸುಗಳ ಹಾಲು ಕರೆದು ಮನೆಗೆ ಬಂದ ನಂತರ ತೋಟದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿಗೆ 3 ಮೇಕೆ 1 ಕುರಿಮರಿ ಸಾವನ್ನಪ್ಪಿದ್ದು, ಮತ್ತೊಂದು ಕುರಿ ತೀವ್ರವಾಗಿ ಗಾಯಗೊಂಡಿದೆ.

ABOUT THE AUTHOR

...view details