ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಎರಡು ದಿನಗಳ ಹಿಂದೆ ನಗರದ ಒಂದನೇ ಸಿಸಿಎಚ್ ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿರುವುದಾಗಿ ಸಿಬಿಐ ಅಧಿಕೃತ ಮಾಹಿತಿ ನೀಡಿದೆ.
ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್ಶೀಟ್..ಸಿಬಿಐನಿಂದ ಅಧಿಕೃತ ಮಾಹಿತಿ - The IMA is a multi-crore fraud case
ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿಯಿಂದ ಪ್ರಾಥಮಿಕ ಮಾಹಿತಿ ಪಡೆದು ಎರಡು ದಿನಗಳ ಹಿಂದೆ ನಗರದ ಒಂದನೇ ಸಿಸಿಎಚ್ ನ್ಯಾಯಾಲಯಕ್ಕೆ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ ಮನ್ಸೂರ್ ಸೇರಿದಂತೆ 20 ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿರುವುದಾಗಿ ಸಿಬಿಐ ಅಧಿಕೃತ ಮಾಹಿತಿ ನೀಡಿದೆ.
50 ಸಾವಿರಕ್ಕೂ ಹೆಚ್ಚು ದೂರುದಾರರು ಹಣ ವಂಚನೆಯಾಗಿದೆ ಎಂದು ನೀಡಿದ ದೂರಿನಡಿ ಮೈತ್ರಿ ಸರ್ಕಾರ ಎಸ್ಐಟಿ ತನಿಖೆ ನಡೆಸಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರಕರಣವನ್ನು ಸಿಬಿಐ ಆದೇಶ ನೀಡಿದ್ದ ಹಿನ್ನೆಲೆ,ಎಸ್ಐಟಿ ತನಿಖಾ ವರದಿಯನ್ನು ಸಿಬಿಐ ಹಸ್ತಾಂತರಿಸಿತ್ತು. ಎಫ್ಐಆರ್ ದಾಖಲಿಸಿಕೊಂಡು ಪ್ರಾಥಮಿಕ ಮಾಹಿತಿ ಪಡೆದ ಸಿಬಿಐ, ಪ್ರಕರಣದ ಆರೋಪಿಯಾಗಿರುವ ಐಎಂಎ ಮಾಲೀಕ ಮೊಹಮ್ಮದ್ ಮನ್ಸೂರ್ ಅಲಿ ಖಾನ್ ಸೇರಿ 20 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಂಸ್ಥೆಯ ನಿರ್ದೇಶಕರಾಗಿದ್ದ ನಿಜಾಮುದ್ದೀನ್,ನಾಸೀರ್ ಹುಸೇನ್, ನವೀದ್ ಹುಸೇನ್, ನವೀನ್ ಅಹಮದ್, ವಸೀಂ, ಆರ್ಷಾದ್ ಖಾನ್, ಅಹಮ್ಮದ್, ದಾದಾಪೀರ್, ಸದಸ್ಯರಾದ ಶಹಾದಾಬ್ ಅಕ್ಕರ್ ಖಾನ್, ಫೈರೋಜ್ ಅಹಮ್ಮದ್, ಮೊಹಮ್ಮದ್ ಇದ್ರಿಸ್, ಉಸ್ಮಾನ್ ಅಬ್ರೇಜ್, ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್, ಉಳಿದ ಆರೋಪಿಗಳಾದ ಸೈಯದ್ ಮುಜಾಯಿದ್ ಸೇರಿ 15 ಮಂದಿ ಹಾಗೂ ಐಎಂಎ ಸಮೂಹ ಸಂಸ್ಥೆಯ ಐ.ಎ.ಅಡ್ವೈಸರಿ ಪ್ರೈವೇಟ್ ಲಿಮಿಟೆಡ್, ಐಎಂಎ ಹೆಲ್ತ್ ಕೇರ್ ಪ್ರೈ.ಲಿ. ಐಎಂಎ ಜ್ಯೂವೆಲ್ಲರಿ, ಐಎಂಎ ಬುಲಿಯನ್ ಅಂಡ್ ಟ್ರೇಡಿಂಗ್ ಎಲ್ಎಲ್ಪಿ ಪ್ರೈ.ಲಿ. ಹಾಗೂ ಐಎಂ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮೆಟೆಡ್ ವಿರುದ್ಧ ಐಪಿಎಸ್ ಸೆಕ್ಷನ್ 120 (ಬಿ), 406,409,420,477 (ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.