ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ: ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುವತ್ತ ಚನ್ನದೇವಿ ಅಗ್ರಹಾರ.. ಸ್ವಚ್ಛ ಗ್ರಾಮಕ್ಕೆ ಜನರ ಪಣ - ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುವತ್ತ ಚನ್ನದೇವಿ ಅಗ್ರಹಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ಘಟಕ ಗ್ರಾಮಗಳಲ್ಲಿ ಹರಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಿದೆ.

plastic wastage free
ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುವತ್ತ ಚನ್ನದೇವಿ ಅಗ್ರಹಾರ

By

Published : Dec 22, 2021, 10:58 PM IST

ದೊಡ್ಡಬಳ್ಳಾಪುರ:ಗ್ರಾಮದ ಎಲ್ಲೆಂದರಲ್ಲಿ ಹರಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಗ್ರಾಮಗಳು ಸಹ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುತ್ತಿವೆ, ಅದಕ್ಕೊಂದು ತಾಜಾ ಉದಾಹರಣೆ ಚನ್ನದೇವಿ ಅಗ್ರಹಾರದ ಘನ ತ್ಯಾಜ್ಯ ವಿಲೇವಾರಿ ಘಟಕ.

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗುವತ್ತ ಚನ್ನದೇವಿ ಅಗ್ರಹಾರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚನ್ನದೇವಿ ಅಗ್ರಹಾರ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ಘಟಕ ಗ್ರಾಮಗಳಲ್ಲಿ ಹರಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕಿದೆ.

ಸುಮಾರು 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಘಟಕ ಕಸ ವಿಂಗಡಣೆಯಲ್ಲಿ ತಾಲೂಕಿಗೆ ಮಾದರಿಯಾಗಿದೆ, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನ ಗ್ರಾಮಗಳಿಂದ ಸಂಗ್ರಹಿ ವಿಲೇವಾರಿ ಮಾಡುತ್ತಿದೆ. ಪಂಚಾಯಿತಿ ವ್ಯಾಪ್ತಿಗೆ ಬರುವ 7 ಗ್ರಾಮಗಳಿಂದ ಸುಮಾರು 1000 ಕ್ಕೂ ಹೆಚ್ಚು ಮನೆಗಳಿದ್ದು,ನಿತ್ಯ ಒಂದು ಮನೆಗೆ 2 ಕೆಜಿಗೂ ಹೆಚ್ಚು ಕಸ ಉತ್ಪತ್ತಿ ಆಗುತ್ತದೆ.

ಈ ಕಸವನ್ನ ಸಂಗ್ರಹಿಸಲು ಒಂದು ವಾಹನ ನಿಯೋಜನೆ ಮಾಡಲಾಗಿದೆ. ವಾರದಲ್ಲಿ ನಾಲ್ಕು ದಿನ ಗ್ರಾಮಗಳಿಗೆ ಹೋಗುವ ಕಸ ಸಂಗ್ರಹದ ವಾಹನ ಮನೆಗಳಿಂದ ಘನತ್ಯಾಜ್ಯ ಸಂಗ್ರಹಿಸುತ್ತದೆ. ನಂತರ ಘಟಕಕ್ಕೆ ತಂದು ಕಸವನ್ನ ವಿಂಗಡನೆ ಮಾಡಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.

ಪ್ಲಾಸ್ಟಿಕ್ ಕವರ್​ಗಳು, ಮದ್ಯದ ಪ್ಯಾಕೇಟ್​ಗಳು ಮತ್ತು ಬಾಟಲ್​ಗಳು, ಕಾಗದದ ರಟ್ಟುಗಳು ಹೆಚ್ಚಾಗಿ ಸಂಗ್ರಹವಾಗುತ್ತವೆ. ಹಸಿ ಕಸವನ್ನ ಜನರು ತಮ್ಮ ತಿಪ್ಪೆಗಳಿಗೆ ಹಾಕುವುದರಿಂದ ಹಸಿ ಕಸದ ಹೊರೆ ಸದ್ಯಕ್ಕಿಲ್ಲ. ಹೆಣ್ಣು ಮಕ್ಕಳ ಸ್ಯಾನಿಟರಿ ಪ್ಯಾಡ್​ಗಳು ಸಹ ಸಂಗ್ರಹವಾಗುತ್ತವೆ.

ಇದನ್ನು ಯಂತ್ರದ ಮೂಲಕ ಘಟಕದಲ್ಲಿಯೇ ಸುಟ್ಟು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ತಿಂಗಳಿಗೊಮ್ಮೆ ಪ್ಲಾಸ್ಟಿಕ್ ತ್ಯಾಜ್ಯ ಮಾರಾಟ ಮಾಡಿ ಅದರಿಂದಲೂ ಅಲ್ಪ ವರಮಾನ ಪಂಚಾಯಿತಿ ಪಡೆಯುತ್ತಿದೆ.

ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ಒಂದೇ ಮತ

ಘನ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭವಾಗುವ ಮುನ್ನ ಕಸವನ್ನ ಕುಂಟೆ, ಚರಂಡಿ, ತಿಪ್ಪೆಗಳಿಗೆ ಎಸೆಯುತ್ತಿದ್ದರು, ತ್ಯಾಜ್ಯದಿಂದ ಚರಂಡಿಗಳು ಕಟ್ಟಿಕೊಳ್ಳುತ್ತಿದ್ದು ಸೊಳ್ಳೆ ಮತ್ತು ನೋಣಗಳಿಗೆ ಅಶ್ರಯ ತಾಣವಾಗಿತ್ತು.

ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಮೇಲು ಪರಿಣಾಮ ಬೀರುತ್ತಿತ್ತು ಮತ್ತು ಮೇವಿನೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಸಹ ಜಾನುವಾರುಗಳ ಹೊಟ್ಟೆ ಸೇರಿ ಅವುಗಳ ಪ್ರಾಣಕ್ಕೆ ಕಂಠಕವಾಗುತ್ತಿತ್ತು. ಘನ ತ್ಯಾಜ್ಯ ಘಟಕದಿಂದ ಗ್ರಾಮದಲ್ಲಿ ಸ್ವಚ್ಟ ಪರಿಸರ ನಿರ್ಮಾಣವಾಗಿದೆ. ಇದರಿಂದ ಪ್ರೇರಣೆಗೊಂಡಿರುವ ಜನರು ಸಹ ಕಸವನ್ನ ಕಸ ಸಂಗ್ರಹದ ವಾಹನಕ್ಕೆ ಹಾಕುತ್ತಿದ್ದಾರೆ.

ABOUT THE AUTHOR

...view details