ದೊಡ್ಡಬಳ್ಳಾಪುರ:ಹಾಲು ತರಲೆಂದು ಹೋದ ಮಹಿಳೆಯ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಕಳೆದ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಯಲ್ಲಿ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳ ಕತ್ತಿನಲ್ಲಿದ್ದ ಸರ ಎಳೆದು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಶಾಂತಿನಗರದ ನಿವಾಸಿ ನಿರ್ಮಲ ಆಭರಣ ಕಳೆದುಕೊಂಡಿದ್ದಾರೆ.
ದೊಡ್ಡಬಳ್ಳಾಪುರ: ಮಹಿಳೆಯ ಹಿಂಬಾಲಿಸಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ - chain snatching case doddaballapur
ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ನಿರ್ಮಲ, ಸರಕಳೆದುಕೊಂಡವರು
ಶಾಂತಿನಗರದ ನಿವಾಸಿ ನಿರ್ಮಲ ಹೇಳಿಕೆ
ತನ್ನನ್ನೇ ಹಿಂಬಾಲಿಸಿ ಬರುತ್ತಿರುವ ಬೈಕ್ ಸವಾರರನ್ನು ಗಮನಿಸಿದ ಮಹಿಳೆ ಸರವನ್ನು ಜೋಪಾನವಾಗಿ ಹಿಡಿದುಕೊಂಡಿದ್ದರು. ಆದರೂ ರಸ್ತೆಯಲ್ಲಿ ಯಾರೂ ಇಲ್ಲದೇ ಇದ್ದುದನ್ನು ಗಮನಿಸಿದ ಆತ ಕೃತ್ಯ ಎಸಗಿದ್ದಾನೆ. 26 ಗ್ರಾಂ ತೂಕದ ಚಿನ್ನದ ಸರ ಕಳ್ಳನ ಪಾಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ವೃದ್ಧೆಯ ಸರಗಳ್ಳತನ ಮಾಡಿ ಆರೋಪಿಗಳು ಪರಾರಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
Last Updated : Dec 6, 2022, 5:33 PM IST