ನೆಲಮಂಗಲ: ಕನ್ನಡ ಸಿನಿಮಾದ ಪ್ರಸಿದ್ಧ ಹಿರಿಯ ನಟಿ ಡಾ.ಲೀಲಾವತಿಯವರ ಮನೆಯ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಕೊರಳಿನಲ್ಲಿದ್ದ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನ ಹಿಡಿದ ಗ್ರಾಮಸ್ಥರು ಸಖತ್ ಗೂಸಾ ಕೊಟ್ಟಿದ್ದಾರೆ.
ವಿಳಾಸ ಕೇಳುವ ನೆಪದಲ್ಲಿ ಸರ ಕದ್ದು ಪರಾರಿ : ಕಳ್ಳನಿಗೆ ಬಿತ್ತು ಸಖತ್ ಗೂಸಾ - ವಿಳಾಸ ಕೇಳುವ ನೆಪದಲ್ಲಿ ಸರಗಳ್ಳತನ
ನಟಿ ಡಾ.ಲೀಲಾವತಿಯವರ ಮನೆಯ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಕೊರಳಿನಲ್ಲಿದ್ದ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನ ಹಿಡಿದ ಗ್ರಾಮಸ್ಥರು ಸಖತ್ ಗೂಸಾ ಕೊಟ್ಟಿದ್ದಾರೆ.

ನೆಲಮಂಗಲ ತಾಲೂಕಿನ ಗುರುವನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೈಕ್ನಲ್ಲಿ ಬಂದಿದ್ದ ಸರಗಳ್ಳ ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಬಳಿ ಹೋಗಿದ್ದಾನೆ. ನಟಿ ಲೀಲಾವತಿ ಮನೆ ವಿಳಾಸ ಕೇಳುತ್ತಿರುವಾಗಲೇ ಮಹಿಳೆಯ ಕುತ್ತಿಗೆಯಲ್ದಿದ್ದ ಚಿನ್ನದ ಸರ ಕಸಿದು ಸೋಲದೇವನಹಳ್ಳಿಯತ್ತ ಪರಾರಿಯಾಗಿದ್ದಾನೆ.
ಚಿನ್ನದ ಸರ ಕಳೆದುಕೊಂಡ ಮಹಿಳೆ ಜೋರಾಗಿ ಕಿರುಚಿದ್ದಾಳೆ ಆಗ ಹತ್ತಿರದಲ್ಲಿದ್ದ ಅದೇ ಗ್ರಾಮದ ನಿವಾಸಿ ನವೀನ್ ಎಂಬುವ ಯುವಕ ಪಕ್ಕದ ಸೋಲದೇವನಹಳ್ಳಿಯ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನವೀನ್ ಸ್ನೇಹಿತ ತನ್ನ ಗ್ರಾಮದ ಜನರನ್ನು ಒಗ್ಗೂಡಿಸಿ ರಸ್ತೆಯಲ್ಲಿ ಕಾದು ಬೈಕಿನಲ್ಲಿ ಕಳ್ಳ ಬಂದಾಗ ಅಡ್ಡಗಟ್ಟಿ ಹಿಡಿದು ದೇವಸ್ಥಾನ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸರಗಳ್ಳನನ್ನು ಮಾಗಡಿ ತಾಲೂಕಿನ ಕರಡಿದೊಡ್ಡಿ ನಿವಾಸಿ ಸಂತೋಷ ಎಂದು ತಿಳಿದು ಬಂದಿದೆ. ಕಳ್ಳನನ್ನು ಪೊಲೀಸರ ವಶಕ್ಕೆ ನೀಡಿದ್ದು, ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.