ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವುನೋವುಗಳಾಗಿಲ್ಲ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ.. ಯಾರಿಗೂ ಏನೂ ಆಗಲಿಲ್ಲ.. ಯಾಕಂದ್ರೇ, - undefined
ಬೆಂಗಳೂರು ಗ್ರಾಮಾಂತರ ನೆಲಮಂಗಲದ ಕುಣಿಗಲ್ ಬೈಪಾಸ್ ಹತ್ತಿರ ಶುಕ್ರವಾರ ಸರಣಿ ಅಪಘಾತ ಸಂಭವಿಸಿದೆ. ಸಣ್ಣ ಪುಟ್ಟ ಗಾಯಗಳಿಂದ ವಾಹನ ಚಾಲಕರು ಪರಾರಿಯಾಗಿದ್ದಾರೆ. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ.. ಯಾರಿಗೂ ಏನೂ ಆಗಲಿಲ್ಲ.. ಯಾಕಂದ್ರೇ,](https://etvbharatimages.akamaized.net/etvbharat/prod-images/768-512-3818826-thumbnail-3x2-nlmg.jpg)
ಸರಣಿ ಅಪಘಾತದಲ್ಲಿ ಪಾರಾದ ವಾಹನ ಚಾಲಕರು
ಸರಣಿ ಅಪಘಾತದಲ್ಲಿ ಪಾರಾದ ವಾಹನ ಚಾಲಕರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕುಣಿಗಲ್ ಬೈಪಾಸ್ನ ಹತ್ತಿರ ಶುಕ್ರವಾರ ಈ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಅತ್ಯಂತ ವೇಗವಾಗಿ ಹೋಗುತ್ತಿದ್ದ ಮಾರುತಿ ಓಮ್ನಿ ಕಾರ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿದ್ದ ಎರಡು ಕಾರುಗಳು ಒಮ್ನಿಗೆ ಡಿಕ್ಕಿ ಹೊಡೆದಿವೆ.ಇದರಿಂದ ಕಾರುಗಳು ಮುಂಭಾಗ ಮತ್ತು ಹಿಂಭಾಗ ಜಖಂಗೊಂಡಿವೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.