ಕರ್ನಾಟಕ

karnataka

ETV Bharat / state

ಮಾಜಿ ಶಾಸಕನ ಮನೆಯಲ್ಲಿ ವಿಜಯದಶಮಿ ಸಂಭ್ರಮ: ಬಜಾಜ್​ ಚೇತಕ್​​ನಲ್ಲಿ ಪತ್ನಿಯೊಂದಿಗೆ ಮುನಿರಾಜು ಜಾಲಿ ರೈಡ್​ - ಮಾಜಿ ಶಾಸಕ ಮುನಿರಾಜು ಮನೆಯಲ್ಲಿ ವಿಜಯದಶಮಿ

ದಾಸರಹಳ್ಳಿಯ ಮಾಜಿ ಶಾಸಕ ಎಸ್​​.ಮುನಿರಾಜು ತಮ್ಮ ಕುಟುಂಬಸ್ಥರೊಂದಿಗೆ ವಿಜಯದಶಮಿ ಹಬ್ಬವನ್ನ ಆಚರಿಸಿದ್ದು, ಈ ವೇಳೆ ಧರ್ಮಪತ್ನಿಯನ್ನ ಬಜಾಜ್​ ಚೇತಕ್​ ನಲ್ಲಿ ಕೂರಿಸಿಕೊಂಡು ಎರಡು ರೌಂಡ್​​ ಹಾಕುವ ಮೂಲಕ ಸಂಭ್ರಮಿಸಿದರು.

Celebration of Vijayadashami
ವಾಹನಗಳಿಗೆ ಪೂಜೆ ಸಲ್ಲಿಸುತ್ತಿರುವ ಮಾಜಿ ಶಾಸಕ ಮುನಿರಾಜು

By

Published : Oct 26, 2020, 3:47 PM IST

ನೆಲಮಂಗಲ:ಬೆಂಗಳೂರು ಹೊರವಲಯದ ಶೆಟ್ಟಿಹಳ್ಳಿ ನಿವಾಸದಲ್ಲಿ ದಾಸರಹಳ್ಳಿ ಮಾಜಿ ಶಾಸಕ ಎಸ್.ಮುನಿರಾಜು ಕುಟುಂಬಸ್ಥರೊಂದಿಗೆ ಆಯುಧ ಪೂಜೆ ಸಮೇತ ವಿಜಯದಶಮಿ ಹಬ್ಬವನ್ನು ಸಡಗರದಿಂದ ಆಚರಿಸಿದರು.

ವಾಹನಗಳಿಗೆ ಪೂಜೆ ಸಲ್ಲಿಸುತ್ತಿರುವ ಮಾಜಿ ಶಾಸಕ ಮುನಿರಾಜು

ತಮ್ಮ ಕುಟುಂಬ ಮತ್ತು ಕಚೇರಿ ಸಿಬ್ಬಂದಿಯೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕರು, ಕಾರು, ಬೈಕ್, ಇನ್ನಿತರ ವಾಹನಗಳಿಗೆ ಪೂಜೆ ಸಲ್ಲಿಸಿದರು. ಇನ್ನು ಇದೇ ವೇಳೆ 1983 ರಲ್ಲಿ ಖರೀದಿಸಿದ್ದ ಬಜಾಜ್ ಚೇತಕ್ ಸ್ಕೂಟರ್​​ನಲ್ಲಿ ತಮ್ಮ ಪತ್ನಿ ಸುಜಾತರನ್ನು ಕೂರಿಸಿಕೊಂಡು ಜಾಲಿಯಾಗಿ ರೌಂಡ್​ ಹಾಕಿರುವುದು ಎಲ್ಲರ ಗಮನ ಸೆಳೆಯಿತು.

ABOUT THE AUTHOR

...view details