ಕರ್ನಾಟಕ

karnataka

ETV Bharat / state

ಸಾವಿನ ಸಂಭ್ರಮ ಸಂಸ್ಕೃತಿ ಅಲ್ಲ, ಧರ್ಮವೂ ಅಲ್ಲ: ಡಾ. ಬರಗೂರು ರಾಮಚಂದ್ರಪ್ಪ - ಗಿರೀಶ್ ಕಾರ್ನಾಡ್, ಕನ್ನಡ ಸಾಹಿತ್ಯ ಪರಿಷತ್

ದಿ. ಡಾ.ಗಿರೀಶ್ ಕಾರ್ನಾಡ್ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಸಾವಿಗೆ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯೂ ಅಲ್ಲ, ಧರ್ಮವೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ.ಗಿರೀಶ್ ಕಾರ್ನಾಡ್ ರಿಗೆ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಮಾರಂಭ.

By

Published : Jun 11, 2019, 8:43 PM IST

ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಕನ್ನಡದ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಮಾತನಾಡಿದ ಡಾ.ಬರಗೂರು ರಾಮಚಂದ್ರಪ್ಪ, ಸಾವಿಗೆ ಸಂಭ್ರಮಿಸುವುದು ನಮ್ಮ ಸಂಸ್ಕೃತಿಯೂ ಅಲ್ಲ, ಧರ್ಮವೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಪ್ರತಿಕ್ರಿಯೆ


ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 'ಡಾ.ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ನಾಡ್‌ ಅವರು, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಾಗೂ ಪುರಾಣಗಳಿಗೆ ಮರು ವ್ಯಾಖ್ಯಾನ ನೀಡಿದವರು ಎಂದು ಹೇಳುವ ಮೂಲಕ ಅಗಲಿದ ಚೇತನದ ಮೇರು ವ್ಯಕ್ತಿತ್ವ ಹಾಗೂ ವೃತ್ತಿ ನಿಷ್ಠೆಯನ್ನು ಬಣ್ಣಿಸಿದರು. ಇದೇ ವೇಳೆ ಅವರ ನಿಧನದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಂಭ್ರಮಿಸಿ ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದಿ. ಡಾ.ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

ಹಿರಿಯ ಸಾಹಿತಿ ಡಾ.ಚಂದ್ರಶೇಖರ ಪಾಟೀಲ ಮಾತನಾಡಿ, ಕಾರ್ನಾಡ್‌ ಯಾವುದೇ ಧಾರ್ಮಿಕ ಸಂಸ್ಕಾರಳಿಲ್ಲದೇ, ಗೊಡ್ಡು ಆಚರಣೆಗಳ ವಿರುದ್ಧ ಇದ್ದವರು. ಲೋಕಲ್ ಆಗಿ ಯೋಚಿಸದೆ ಗ್ಲೋಬಲ್ ಆಗಿಯೇ ಇದ್ದರು. ಅವರನ್ನು ಕಳೆದುಕೊಂಡಿದ್ದು ತುಂಬಾ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಭಾರತದ ಇತಿಹಾಸವನ್ನು ಕಾರ್ನಾಡ್‌, ರೂಪಕದ ಮೂಲಕ ಚಿತ್ರಿಸಿದ್ದಾರೆ. ಅದ್ಭುತ ನಾಟಕಗಳನ್ನು ರಚಿಸಿರುವ ಅಪರೂಪದ ನಾಟಕಕಾರ. ತಮ್ಮ 26ರ ವಯಸ್ಸಿನಲ್ಲಿ 'ತುಘಲಕ್' ನಾಟಕ ಬರೆದ ಸಂದರ್ಭದಲ್ಲಿ ದೇಶದಲ್ಲಿ ಒಂದು ರೀತಿ ಸಂಚಲನ ಉಂಟಾಯಿತು. ಅನಾರೋಗ್ಯದ ಸಂದರ್ಭದಲ್ಲೂ ನಟನೆಯಲ್ಲಿ ತೊಡಗಿದ್ದು ಅವರ ವ್ಯಕ್ತಿತ್ವ ತೋರಿಸುತ್ತದೆ. ಭಾರತೀಯ ರಂಗಭೂಮಿಗೆ ಹೊಸ ತೇಜಸ್ಸು ನೀಡಿದವರಲ್ಲಿ ಗಿರೀಶ್ ಕಾರ್ನಾಡ್ ಒಬ್ಬರು ಎಂದು ಕೊಂಡಾಡಿದರು.
ಶ್ರದ್ಧಾಂಜಲಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ರಾ.ನಂ ಚಂದ್ರಶೇಖರ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಿ.ಕೆ.ಚನ್ನೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details