ದೇವನಹಳ್ಳಿ/ಬೆಂಗಳೂರು :ಬೆಂಗಳೂರು-ಕೊಲಂಬೊ ವಿಮಾನದಲ್ಲಿ ಶ್ರೀಲಂಕಾ ದೇಶಕ್ಕೆ ಕ್ಯಾಸಿನೋ ಆಡಲು ತೆರಳುತ್ತಿದ್ದ ಪ್ರಯಾಣಿಕರನ್ನು ಏರ್ ಕಾರ್ಗೋ ಇಂಟಿಲಿಜೆನ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಕೆಐಎಎಲ್‌ನಲ್ಲಿ ಕ್ಯಾಸಿನೋ ಆಡಲು ಶ್ರೀಲಂಕಾಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವಿಚಾರಣೆ.. - ಕ್ಯಾಸಿನೋ ವಿವಾದ
23 ಪ್ರಯಾಣಿಕರು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ₹25 ಸಾವಿರ ಹಣದೊಂದಿಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಉಲ್ಲಂಘನೆ. ಏರ್ ಕಾರ್ಗೋ ಇಂಟಿಲಿಜೆನ್ಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾಗ 23 ಪ್ರಯಾಣಿಕರ ಬಳಿ ನಗದು ಪತ್ತೆಯಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 76 ಪ್ರಯಾಣಿಕರು ಶ್ರೀಲಂಕಾಗೆ ಪ್ರಯಾಣ ಬೆಳೆಸಿದ್ರು. ಈ ಪೈಕಿ 23 ಪ್ರಯಾಣಿಕರು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ₹25 ಸಾವಿರ ನಗದು ಇರಿಸಿಕೊಂಡು ಪ್ರಯಾಣ ಬೆಳೆಸಿದ್ದರು ಎಂದು ತಿಳಿದು ಬಂದಿದೆ. ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ಉಲ್ಲಂಘನೆ. ಏರ್ ಕಾರ್ಗೋ ಇಂಟಿಲಿಜೆನ್ಸ್ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾಗ 23 ಪ್ರಯಾಣಿಕರ ಬಳಿ ನಗದು ಪತ್ತೆಯಾಗಿದ್ದು, ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಏನಿದು ಕ್ಯಾಸಿನೋ?:ಜೂಜು ಅಡ್ಡೆಗಳನ್ನ ಕ್ಯಾಸಿನೋ ಎಂದು ಕರೆಯಲಾಗುತ್ತದೆ. ಭಾರತದ ಗೋವಾದಲ್ಲಿಯೂ ಸಹ ಕ್ಯಾಸಿನೋ ಇದ್ದು, ಗೋವಾಕ್ಕೆ ಹೋಲಿಕೆ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಕ್ಯಾಸಿನೋ ಅಗ್ಗವಾಗಿದೆ. ಪ್ರವಾಸದ ಹೆಸರಲ್ಲಿ ಶ್ರೀಲಂಕಾಕ್ಕೆ ಪ್ರಯಾಣಿಕರಿಗೆ ಹೆಚ್ಚಾಗಿ ಕ್ಯಾಸಿನೋ ಪ್ರಮುಖ ಆಕರ್ಷಣೆ. ಕರ್ನಾಟಕದಿಂದ ಪ್ರತಿ ತಿಂಗಳು 5 ಸಾವಿರ ಪ್ರಯಾಣಿಕರು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸುತ್ತಾರೆ.