ನೆಲಮಂಗಲ:ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಮಧ್ಯ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ. ಕಾರು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮನೆ ಮುಂದೆ ನಿಲ್ಲಿಸಿದ್ದ ಕಾರು ಬೆಳಗಾಗುವಷ್ಟರಲ್ಲಿ ಮಾಯ! - ನೆಲಮಂಗಲದಲ್ಲಿ ಕಾರು ಕಳವು
ನೆಲಮಂಗಲದ ಜಯನಗರದ ವಾಸಿಯೊಬ್ಬರು ತಮ್ಮ ಮನೆ ಮುಂದೆ ರಾತ್ರಿ ಕಾರನ್ನು ನಿಲ್ಲಿಸಿದ್ದರು. ಬೆಳಗಾಗುವಷ್ಟರಲ್ಲಿ ಕಾರು ಕಳುವಾಗಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.
ಕಾರು ಕಳ್ಳತನವಾದ ಸ್ಥಳ
ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದ ಜಯನಗರದಲ್ಲಿ ಈ ಘಟನೆ ನಡೆದಿದೆ. ಪಟ್ಟಣದ ನಿವಾಸಿ ಮಹಮದ್ ಸಮೀರ್ ತಮ್ಮ ಮಾರುತಿ ಝೆನ್ ಕಾರನ್ನು ರಾತ್ರಿ 11 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಹೋಗಿದ್ದರು. ಮುಂಜಾನೆ ನೋಡಿದಾಗ ಕಾರ್ ಕಳುವಾಗಿತ್ತು. ರಾತ್ರಿ ಸುಮಾರು 1 ಗಂಟೆ 40 ನಿಮಿಷಕ್ಕೆ ಕಾರು ಕಳ್ಳತನವಾಗಿದ್ದು, ಕಾರನ್ನು ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.