ದೇವನಹಳ್ಳಿ: ಇತ್ತೀಚೆಗಷ್ಟೇ ಇಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಹೊಸ ಕ್ರೀಡಾಂಗಣದಲ್ಲಿ ಕ್ರಿಕೆಟ್, ಕಬಡ್ಡಿ, ಖೋ ಖೋ, ವಾಲಿಬಾಲ್‌ನಂತಹ ಆಟಗಳಿಗೆ ಅನುಮತಿ ನೀಡುವ ಬದಲು ಕಾರ್ ರೇಸ್ಗೆ ಕ್ರೀಡಾ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಇಲ್ಲಿನ ಪರಿಸರ ಧೂಳುಮಯವಾಗಿದೆ. ಸಮೀಪದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೊಟೊ ಸ್ಪೋರ್ಟ್ ವತಿಯಿಂದ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್ಷಿಪ್ ಕಾರ್ ರೇಸ್ ಆಯೋಜಿಸಲಾಗಿದೆ. ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಈ ರೇಸ್ ನಡೆಯುತ್ತಿದೆ. ನಾಗಾಲ್ಯಾಂಡ್, ಕೋಲ್ಕತಾ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್, ಕೇರಳದಿಂದ 60 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಮೂರು ದಿನಗಳ ಕಾಲ ಆಯೋಜಿಸಿರುವ ರೇಸ್ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೂ ನಡೆಯುತ್ತಿದೆ. ಅದರಲ್ಲೂ, ಬೆಂಗಳೂರಿನ ಟೆಕ್ಕಿಗಳು ಸೇರಿದಂತೆ ಕಾರ್ ರೇಸ್‌ಪ್ರಿಯರು ಸ್ಥಳಕ್ಕೆ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ;ಕಾರು ಮೂರು ಪಲ್ಟಿಯಾದ್ರೂ ಛಲಬಿಡದ ಚಾಲಕ: ಎದೆ ಝಲ್ ಎನ್ನುವ ದೃಶ್ಯ