ಕರ್ನಾಟಕ

karnataka

ETV Bharat / state

ಗಾಂಜಾ ಮತ್ತಿನಲ್ಲಿ ಆಡಿ ಕಾರ್​​​ಗೆ ಬೆಂಕಿ ಹಚ್ಚಲು ಯತ್ನ: ಯುವಕನಿಗೆ ಹಿಗ್ಗಾ ಮುಗ್ಗ ಥಳಿತ - ಯುವಕನಿಗೆ ಥಳಿಸಿದ ಕಾರ್​ ಮಾಲೀಕರು

ಮಹೇಶ್ ಎಂಬಾತ ಬುಧವಾರ ರಾತ್ರಿ ಗಾಂಜಾ ಸೇವನೆ ಮಾಡಿದ ಕಿಕ್​​ನಲ್ಲಿ ಕಾರಿಗೆ ಬೆಂಕಿ ಇಡಲು ಮುಂದಾಗಿದ್ದ. ಆ ವೇಳೆ ಅಲ್ಲೇ ಇದ್ದವರನ್ನು ನೋಡಿ ಹೆದರಿ ತಪ್ಪಿಸಿಕೊಂಡು ಹೋಗಿದ್ದ. ಈ ಸಂಬಂಧ ನಿನ್ನೆಯಿಂದ ಹುಡುಕಾಟ ನಡೆಸಿದ ಕಾರ್ ಮಾಲೀಕರು ಮಹೇಶ್​​ನನ್ನು ಪತ್ತೆ ಮಾಡಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ಗಾಂಜಾ ಮತ್ತಿನಲ್ಲಿ ಆಡಿ ಕಾರ್​​​ಗೆ ಬೆಂಕಿ ಹಚ್ಚಲು ಯತ್ನ
ಗಾಂಜಾ ಮತ್ತಿನಲ್ಲಿ ಆಡಿ ಕಾರ್​​​ಗೆ ಬೆಂಕಿ ಹಚ್ಚಲು ಯತ್ನ

By

Published : Jan 21, 2022, 12:02 AM IST

ಕೆ.ಆರ್.ಪುರ: ಗಾಂಜಾ ನಶೆಯಲ್ಲಿ ಆಡಿ ಕಾರಿಗೆ ಬೆಂಕಿ ಹಚ್ಚಲು ಮುಂದಾಗಿದ್ದ ಯುವಕರನ್ನ ಮನಬಂದಂತೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ ಘಟನೆ ಬೆಂಗಳೂರು ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿದರಹಳ್ಳಿಯಲ್ಲಿ ನಡೆದಿದೆ.

ಯುವಕನಿಗೆ ಥಳಿಸಿದ ಕಾರ್​ ಮಾಲೀಕರು

ಮಹೇಶ್ ಎಂಬಾತ ಬುಧವಾರ ರಾತ್ರಿ ಗಾಂಜಾ ಸೇವನೆ ಮಾಡಿದ ಕಿಕ್​​ನಲ್ಲಿ ಕಾರಿಗೆ ಬೆಂಕಿ ಇಡಲು ಮುಂದಾಗಿದ್ದ. ಆ ವೇಳೆ ಅಲ್ಲೇ ಇದ್ದವರನ್ನು ನೋಡಿ ಹೆದರಿ ತಪ್ಪಿಸಿಕೊಂಡು ಹೋಗಿದ್ದ. ಈ ಸಂಬಂಧ ನಿನ್ನೆಯಿಂದ ಹುಡುಕಾಟ ನಡೆಸಿದ ಕಾರ್ ಮಾಲೀಕರು ಮಹೇಶ್​​ನನ್ನು ಪತ್ತೆ ಮಾಡಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ. ಅಭಿಷೇಕ್, ನರೇಂದ್ರ ಸೇರಿದಂತೆ ನಾಲ್ಕೈದು ಮಂದಿ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಯುವಕನನ್ನು ಥಳಿಸುವಾಗ ಸಾರ್ವಜನಿಕರು ನೆರೆದು ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ್ದಾರೆ. ಈ ಹಲ್ಲೆ ನಡೆಸುತ್ತಿದ್ದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರು ಹಲ್ಲೆಯ ಬಗ್ಗೆ ಆವಲಹಳ್ಳಿ ಪೊಲೀಸರ ಗಮನಕ್ಕೆ ತಂದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಸಂಬಂದ ಮೂವರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

ABOUT THE AUTHOR

...view details