ಕರ್ನಾಟಕ

karnataka

ETV Bharat / state

ವಿಡಿಯೋ: ನೆಲಮಂಗಲ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು, ಬೈಕ್​​ - ನೆಲಮಂಗಲ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು

ನೆಲಮಂಗಲ- ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನೆಲಮಂಗಲ ಹೊರವಲಯದ ಯಂಟಗಾನಹಳ್ಳಿ ಬಳಿ ನಡೆದಿದೆ.

ನೆಲಮಂಗಲ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು ಹಾಗೂ ಬೈಕ್​​
ನೆಲಮಂಗಲ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು ಹಾಗೂ ಬೈಕ್​​

By

Published : Aug 29, 2021, 7:10 PM IST

ನೆಲಮಂಗಲ: ಹೆದ್ದಾರಿ ಬಳಿ ನಡೆದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಂಡಿಕಾ ಕಾರು ಹಾಗೂ ಬೈಕ್​​ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ನಾಗರಭಾವಿಯಿಂದ ತುಮಕೂರಿಗೆ ತೆರಳುತ್ತಿದ್ದ ಇಂಡಿಕಾ ಕಾರಿನ ಇಂಜಿನ್​​ನಲ್ಲಿ ತಾಂತ್ರಿಕ ದೋಷದ ಕಾರಣದಿಂದ ಬೆಂಕಿ ಕಾಣಿಸಿಕೊಂಡು, ಕಾರು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿಯಿತು.

ನೆಲಮಂಗಲ ಹೆದ್ದಾರಿ ಬಳಿ ಹೊತ್ತಿ ಉರಿದ ಕಾರು ಹಾಗೂ ಬೈಕ್​​

ಈ ವೇಳೆ ಕಾರಿನಲ್ಲಿದ್ದ ಚಿರಾಗ್, ನಾಗರಾಜು, ನಾಗೇಶ್ ಮತ್ತೋರ್ವ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಬೆಂಕಿಯ ಕೆನ್ನಾಲಿಗೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಂತರ ನೆಲಮಂಗಲ ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದರು.

ತಡೆಗೋಡೆಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬೈಕ್:

ನೆಲಮಂಗಲ ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಗೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಘಟನೆ ನೆಲಮಂಗಲ ಹೊರವಲಯದ ಯಂಟಗಾನಹಳ್ಳಿ ಬಳಿ ನಡೆದಿದೆ. ಶಿವಮೊಗ್ಗ ಮೂಲದ ಗಗನ್ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ವಾರದ ಹಿಂದಷ್ಟೇ ಖರೀದಿ ಮಾಡಿದ್ದರು ಎನ್ನಲಾಗಿದೆ.

ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಸ್ಸಾಗುವ ವೇಳೆ ಅವಘಡ ಸಂಭವಿಸಿದ್ದು, ಬೈಕ್ ಸವಾರನಿಗೆ ಯಾವುದೇ ಗಾಯವಾಗಿಲ್ಲ. ಎರಡೂ ಪ್ರಕರಣಗಳು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.

ಇದನ್ನೂ ಓದಿ: ಮತ್ತೊಂದು ಹೇಯ ಕೃತ್ಯ: ಏಳು ಮಂದಿ ಬಾಲಕರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ABOUT THE AUTHOR

...view details