ಕರ್ನಾಟಕ

karnataka

ETV Bharat / state

ಐರಾವತ ಬಸ್​ ಹರಿದು ಇಬ್ಬರು ಬೈಕ್​ ಸವಾರರು ಸ್ಥಳದಲ್ಲೇ ಸಾವು - ಐರಾವತ ಹರಿದು ಸವಾರರು ಸ್ಥಳದಲ್ಲೇ ಸಾವು

ಹೊಸಕೋಟೆಯಲ್ಲಿ ಬೈಕ್​ ಸವಾರರ ಮೇಲೆ ಬಸ್​​ ಹರಿದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಬೈಕ್​​ ಸ್ಕಿಡ್

By

Published : Oct 21, 2019, 3:04 AM IST

ಹೊಸಕೋಟೆ : ಐರಾವತ ಬಸ್ ಹರಿದು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಾಣಮಾಕನಹಳ್ಳಿ ಗೇಟ್ ಬಳಿ ನಡೆದಿದೆ.

ಬೆಂಗಳೂರು ಮೂಲದ ನಾಗೇಶ್(23), ತೇಜಸ್(22) ಮೃತ ದುರ್ದೈವಿಗಳು. ಬೈಕ್ ನಿಯಂತ್ರಣ ತಪ್ಪಿ ಬೈಕ್​ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಬಂದ ಐರಾವತ ಬಸ್ ನಿಯಂತ್ರಿಸಲಾಗದೆ ಸವಾರರ ಮೇಲೆ ಹರಿದಿದ್ದು, ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಸ್ಥಳಕ್ಕೆ ನಂದಗುಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details