ದೇವನಹಳ್ಳಿ: ಗಲಭೆ ಮಾಡುವವರನ್ನು ಬಂಧಿಸಿದರೂ ನ್ಯಾಯಾಲಯದಲ್ಲಿ ಜಾಮೀನು ತೆಗೆದುಕೊಂಡು ಹೊರಬಂದು ಮತ್ತದೇ ಕೆಲಸ ಮಾಡುತ್ತಾರೆ. ಹೀಗಾಗಿ ಇಂತಹವರಿಗೆ ಕಡಿವಾಣ ಹಾಕಬೇಕಾದರೆ ಮನೆ-ಮಠ ಇಲ್ಲದಂತೆ ಮಾಡಬೇಕು. ರಾಜ್ಯದಲ್ಲೂ ಜೆಸಿಬಿ, ಬುಲ್ಡೋಜರ್ ಮಾದರಿ ಬಂದರೆ ಒಳ್ಳೆಯದು ಎಂದು ಕಂದಾಯ ಸಚಿವ ಆರ್.ಆಶೋಕ್ ಹೇಳಿದರು.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಗಲಭೆಕೋರರ ಮನೆ ಕೆಡಹುವ ಬುಲ್ಡೋಜರ್ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ಹುಬ್ಬಳ್ಳಿ ಘಟನೆಯಲ್ಲೂ ಬಂಧಿತ ಎಲ್ಲ ಆರೋಪಿಗಳು ರೌಡಿಶೀಟರ್ಗಳು. ಜೈಲಿನಿಂದ ಆಚೆ ಬಂದು ಮತ್ತೆ ಒಂದು ವಾರಕ್ಕೆ ಗಲಭೆ ಸೃಷ್ಟಿ ಮಾಡಿದ್ದಾರೆ ಎಂದು ತಿಳಿಸಿದರು.