ಕರ್ನಾಟಕ

karnataka

By

Published : Sep 9, 2019, 5:12 AM IST

ETV Bharat / state

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿದ್ದು ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ ೧ ಘಂಟೆಯಿಂದ ತೆರವು ಕಾರ್ಯಚರಣೆ ಆರಂಭವಾಗಿದೆ.

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಆನೇಕಲ್: ಬೆಂಗಳೂರು- ಪುಟ್ಟೇನಹಳ್ಳಿಯಲ್ಲಿರುವ ಕಟ್ಟಡವೊಂದು ಸಂಜೆ ವೇಳೆ ಕಟ್ಟಡ ಇದ್ದಕ್ಕಿದ್ದ ಹಾಗೆ ಕುಸಿಯಲು ಆರಂಭಿಸಿದ್ದು, ಕಟ್ಟಡದಲ್ಲಿದ್ದ ನಿವಾಸಿಗಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಮಧ್ಯರಾತ್ರಿ 1 ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.

ಇದ್ದಕ್ಕಿದ್ದ ಹಾಗೆ ಕುಸಿದ ಕಟ್ಟಡ; ಕಟ್ಟಡ ನಿವಾಸಿಗಳು ಪ್ರಾಣಾಪಾಯದಿಂದ ಪಾರು

ಒಟ್ಟು 6 ರಿಂದ 8 ಕುಟುಂಬ ಕಟ್ಟಡದಲ್ಲಿ ವಾಸವಿದ್ದು, ಕಟ್ಟಡ ವಾಲಿದ ಅನುಭವವಾದ ಕೂಡಲೇ ಎಲ್ಲರೂ ಆಚೆಗೆ ಧಾವಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದರಿಂದ ಇಂದು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ ಅಂಗಡಿ ಸಾಮಾನುಗಳೆಲ್ಲ ಕಟ್ಟಡದ ಕೆಳಗಡೆಯೇ ಸಿಲುಕಿಕೊಂಡಿದೆ.

ಬಿಬಿಎಂಪಿಯಿಂದ ಪರಿಶೀಲನೆ;

ಸದ್ಯ ಸ್ಥಳಕ್ಕೆ ಬೊಮ್ಮನಹಳ್ಳಿ ವಿಭಾಗದ ಬಿಬಿಎಂಪಿ ಚೀಫ್ ಇಂಜಿನಿಯರ್ ಸಿದ್ದೇಗೌಡ ಬಂದು ಪರಿಶೀಲನೆ ನಡೆಸುತ್ತಿದ್ದು,ಜಾಯಿಂಟ್ ಕಮಿಷನರ್ ಸೌಜನ್ಯ ಹಾಗೂ ಸ್ಥಳೀಯ ಕಾರ್ಪೋರೆಟರ್ ಪ್ರಭಾವತಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಅಲ್ಲದೇ ಇದೀಗ ಮಧ್ಯರಾತ್ರಿ 1ಗಂಟೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಿದೆ.


ABOUT THE AUTHOR

...view details