ಕರ್ನಾಟಕ

karnataka

ETV Bharat / state

ಕೆರೆಗೆ ಈಜಲು ತೆರಳಿದ ಇಬ್ಬರು ಬಾಲಕರ ಪೈಕಿ ಓರ್ವ ನಾಪತ್ತೆ - ಆನೇಕಲ್ ನಾಪತ್ತೆ ಸುದ್ದಿ

ಬೆಂಗಳೂರು ಹೊರವಲದ ಆನೇಕಲ್ ತಾಲೂಕಿನ ಯಡವನಹಳ್ಳಿಯ ಗುಡ್ಡಹಟ್ಟಿ ಕೆರೆಯಲ್ಲಿ ಬಾಲಕ ನಾಪತ್ತೆ ಆಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ 15 ವರ್ಷದ ಅಮಿತ್ ನಾಪತ್ತೆ ಆದವ. ಶುಕ್ರವಾರ ಮಧ್ಯಾಹ್ನ ಸ್ನೇಹಿತನ ಜೊತೆಗೂಡಿ ಗುಡ್ಡಹಟ್ಟಿ ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

swimming in lake
ನಾಪತ್ತೆ

By

Published : Oct 24, 2020, 4:56 AM IST

ಆನೇಕಲ್:ಕೆರೆಗೆ ಈಜಲು ತೆರಳಿದ ಇಬ್ಬರು ಬಾಲಕರ ಪೈಕಿ ಓರ್ವ ಬಾಲಕ ನಾಪತ್ತೆ ಆಗಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲದ ಆನೇಕಲ್ ತಾಲೂಕಿನ ಯಡವನಹಳ್ಳಿಯ ಗುಡ್ಡಹಟ್ಟಿ ಕೆರೆಯಲ್ಲಿ ಬಾಲಕ ನಾಪತ್ತೆ ಆಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ 15 ವರ್ಷದ ಅಮಿತ್ ನಾಪತ್ತೆ ಆದವ. ಶುಕ್ರವಾರ ಮಧ್ಯಾಹ್ನ ಸ್ನೇಹಿತನ ಜೊತೆಗೂಡಿ ಗುಡ್ಡಹಟ್ಟಿ ಕೆರೆಯಲ್ಲಿ ಈಜಾಡಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.

ನಾಪತ್ತೆಯಾದ ಬಾಲಕನಿಗಾಗಿ ಶೋಧ

ಈಜಲು ತೆರಳಿದ್ದ ಪಕ್ಕದ ಮನೆಯ ಸ್ನೇಹಿತ, ಅಮಿತ್​ ಕಾಣೆಯಾದ ಬಗ್ಗೆ ಆತನ ಪೋಷಕರಿಗೆ ತಿಳಿಸಿದ್ದಾನೆ. ಬಳಿಕ ಅತ್ತಿಬೆಲೆ ಪೋಲಿಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಗುರುವಾರ ಸಂಜೆ ಕತ್ತಲಾಗುತ್ತಿದ್ದಂತೆ ಕಾರ್ಯಚರಣೆ ಸ್ಥಗಿತಗೊಳಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಶುಕ್ರವಾರ ಮುಂಜಾನೆಯಿಂದ ಮತ್ತೆ ಶೋಧ ಕಾರ್ಯ ಮುಂದುವರಿಸಿದ್ದರು.

ABOUT THE AUTHOR

...view details