ಆನೇಕಲ್: ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಬಾಯ್ಲರ್ ಸ್ಪೋಟಗೊಂಡು ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ. 'ಬಾಲ್ ಫಾರ್ಮಾ' ಕೆಮಿಕಲ್ ಕಾರ್ಖಾನೆಯ ಎರಡನೇ ಸೆಕ್ಟರ್ನಲ್ಲಿ ಬಾಯ್ಲರ್ ಒತ್ತಡ ಹೆಚ್ಚಾದಾಗ ಒತ್ತಡ ಡಿಸ್ಚಾರ್ಜ್ ಮಾಡಬೇಕಾಗಿತ್ತು. ಆದರೆ, ಪ್ರೆಸರ್ ಡಿಸ್ಚಾರ್ಜ್ ಮಾಡದ ಕಾರಣ ಏಕಾಏಕಿ ಪ್ರೆಸರ್ ಹೆಚ್ಚಾಗಿ ಬಾಯ್ಲರ್ ಸಿಡಿದಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಕಾರ್ಮಿಕರಾಗಿದ್ದ ಪ್ರದೀಪ್, ಮುರುಗನ್ ಮತ್ತು ಕಿರಣ್ ಬಿ ಸಿ ಕೆಮಿಕಲ್ ಸಿಡಿತದಿಂದ ಸುಟ್ಟಗಾಯಗಳಾಗಿ ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.
ಬೇಕರಿ ಮಾಲೀಕ ಪೆಟ್ರೋಲಿಗೆ ಕಾಸು ಕೊಟ್ಟಿಲ್ಲವೆಂದು ಗ್ರಾಹಕನ ಉದ್ಧಟತನ (ಬೆಂಗಳೂರು): ನಗರದಲ್ಲಿ ಅಂಗಡಿ ಮಾಲೀಕರ ಮೇಲೆ ದಿನದಿಂದ ದಿನಕ್ಕೆ ಪುಂಡರ ಪೌರುಷ ಪ್ರದರ್ಶನ ಮುಂದುವರೆದಿದೆ. ಹೆಚ್ಎಎಲ್, ಜ್ಞಾನಭಾರತಿ, ಬಾಣಸವಾಡಿ ಬಳಿಕ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮಾಳಗಾಳದಲ್ಲಿ ಮತ್ತದೇ ಮಾದರಿಯ ಪ್ರಕರಣ ಮರುಕಳಿಸಿದೆ. ಪೆಟ್ರೋಲ್ ಹಾಕಿಸಲು ಹಣ ಕೊಡಲಿಲ್ಲವೆಂದು ಗ್ರಾಹಕನೊಬ್ಬ ಬೇಕರಿ ಮಾಲೀಕನ ಮೇಲಿನ ಸಿಟ್ಟಿಗೆ ಬೇಕರಿಯ ಗಾಜುಗಳನ್ನು ಒಡೆದು ದಾಂಧಲೆ ನಡೆಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ಮಾಳಗಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೇಕರಿ ಮಾಲೀಕನ ಮೇಲಿನ ಕೋಪಕ್ಕೆ ಅಂಗಡಿಯ ಗಾಜುಗಳನ್ನ ಪುಡಿ ಮಾಡಿರುವ ಆರೋಪ ಪ್ರಕಾಶ್ ಎಂಬಾತನ ವಿರುದ್ಧ ಕೇಳಿಬಂದಿದೆ.