ಬೆಂಗಳೂರು: ಆನೇಕಲ್ ಪೊಲೀಸ್ ಉಪವಿಭಾಗದ ಹೆಬ್ಬಗೋಡಿಯ ವಿನಾಯಕ ನಗರದ ಮನೆಯೊಂದರ 3ನೇ ಮಹಡಿಯ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ. ಪತಿಯೇ ಪತ್ನಿಯನ್ನು ಕೊಲೆಗೈದು ಬೆಡ್ ಶೀಟ್ನಲ್ಲಿ ಕಟ್ಟಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಹೆಬ್ಬಗೋಡಿಯ ಮನೆಯಲ್ಲಿ ಮಹಿಳೆ ಕೊಲೆ; ಗಂಡನಿಂದಲೇ ಕೃತ್ಯ ಶಂಕೆ - ಮಹಿಳೆ ಕೊಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಬ್ಬಗೋಡಿಯ ವಿನಾಯಕ ನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ದೊರೆತಿದೆ.
![ಹೆಬ್ಬಗೋಡಿಯ ಮನೆಯಲ್ಲಿ ಮಹಿಳೆ ಕೊಲೆ; ಗಂಡನಿಂದಲೇ ಕೃತ್ಯ ಶಂಕೆ ಕೊಲೆ](https://etvbharatimages.akamaized.net/etvbharat/prod-images/768-512-16751610-thumbnail-3x2-bin.jpg)
ಕೊಲೆ
ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
ಮನೆಯಿಂದ ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆಯಲ್ಲಿ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಕೊಲೆ ವಿಷಯ ಗೊತ್ತಾಗಿದೆ. ಗಂಡ-ಹೆಂಡತಿ ಇಬ್ಬರು ಈ ಮನೆಯಲ್ಲಿ ವಾಸವಿದ್ದರು. ಗಂಡ ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆ. ಜಾಕಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆ ಕೊಲೆಯಾಗಿದ್ದಾಳೆಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.