ಬೆಂಗಳೂರು:ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿರುವ ಅನರ್ಹತೆಯ ತೀರ್ಪಿನ ಕುರಿತು ಬಿಜೆಪಿಯ ಕೆಲವು ರಾಜಕೀಯ ಗಣ್ಯರು ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಯಾಗಿದೆ. ಹಾಗೂ ಸಂವಿಧಾನದ ತತ್ವಕ್ಕೆ ಅಗೌರವ ಸೂಚಿಸಿದ್ದಾರೆಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದೇನು?
ಕರ್ನಾಟಕ ರಾಜ್ಯದಲ್ಲಿನ ಪ್ರಜಾತಂತ್ರ ವ್ಯವಸ್ಥೆ ಮತ್ತು ಸಂವಿಧಾನದ ಕಗ್ಗೊಲೆ ಆಗಿದೆ. ಸ್ಪೀಕರ್ ಬುದ್ಧಿವಂತರು ಹಾಗೂ ಅನುಭವಿಗಳೆಂದು ನಮ್ಮೆಲ್ಲರಿಗೂ ಗೌರವ ಇತ್ತು. ಆದರೆ ಇವತ್ತು ವಿಧಾನಸಭೆಯ ಗೌರವ ಮಣ್ಣುಪಾಲು ಮಾಡಿದ್ದಾರೆ. ಸ್ಪೀಕರ್ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ ಎಂದರು. ಅಲ್ಲದೇ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಶಾಸಕರು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರ ರಾಜೀನಾಮೆಯ ಕುರಿತು ಕ್ರಮಬದ್ಧವಾಗಿ ರಾಜೀನಾಮೆ ನೀಡಿದರೆ ಅದರ ಅಂಗೀಕಾರ ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದ್ರು, ಆದರೀಗ ಯಾರ ಒತ್ತಡದಿಂದ, ಯಾರ ಆದೇಶದಿಂದ ಅನರ್ಹ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.