ಬೆಂಗಳೂರು: ಕಳೆದ ಮೂರು ದಿನಗಳಿಂದ ರಮಾಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ಕೆಲ ಶಾಸಕರು ಇಂದು 'ಟೆಂಪಲ್ ರನ್' ಮಾಡಿ ದೇವರ ದರ್ಶನ ಪಡೆದರು.
ದೇವರ ಮೊರೆ ಹೋದ ಬಿಜೆಪಿ ಶಾಸಕರು: ರೇಣುಕಾಚಾರ್ಯ ಸೇರಿ ಕೆಲ ಶಾಸಕರಿಂದ ಟೆಂಪಲ್ ರನ್ - kannadanews
ಮೂರು ದಿನಗಳಿಂದ ರಮಡ ರೆಸಾರ್ಟ್ನಲ್ಲಿದ್ದ ಬಿಜೆಪಿ ಶಾಸಕರು ಇಂದು ಬೆಂಗಳೂರಿನ ಕೆಲವು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ಯಲಹಂಕದ ಹೊನ್ನೇನಹಳ್ಳಿಯ ರಮಾಡ ರೆಸಾರ್ಟ್ನಿಂದ ಕಾರುಗಳಲ್ಲಿ ಹೊರಟು ಘಾಟಿ ಸುಬ್ರಹ್ಮಣ್ಯ ಹಾಗೂ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿ ನೀಡಿ ಪೂಜೆ ಸಲ್ಲಿಸಿದರು. ಶಾಸಕ ರೇಣುಕಾಚಾರ್ಯ 10.30ರ ಸುಮಾರಿಗೆ ಪತ್ನಿ ಸುಮಾ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಬೇಡಿಕೊಂಡು ಹರಕೆ ಕಟ್ಟಿಕೊಂಡು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಶಾಸಕರಾದ ದುರ್ಯೋಧನ ಐಹೊಳೆ, ಆನಂದ್ ಮಹಾಮನೆ, ಇನ್ನೋರ್ವ ಶಾಸಕ ಬೆಳಿಗ್ಗೆ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ ಶಾಸಕರು ಬಿಜೆಪಿ ಸರ್ಕಾರ ಬರುವಂತೆ ದೇವರ ಮೊರೆ ಹೋಗಿ ಟೆಂಪಲ್ ರನ್ ಮಾಡಿದ್ದಾರೆ.