ಹೊಸಕೋಟೆ:ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಿಷ್ಟಾವಂತ ಬಿಜೆಪಿ ಮುಖಂಡರನ್ನ ಸಂಸದ ಬಚ್ಚೇಗೌಡರು ಕಡೆಗಣಿಸಿದ್ದಾರೆ ಎಂದು ಬಿಜೆಪಿಯ ಮಾಜಿ ನಗರಸಭಾ ಸದಸ್ಯಜಯರಾಜ್ ಆರೋಪಿಸಿದ್ದಾರೆ.
ನಿಷ್ಟಾವಂತರ ಕಡೆಗಣನೆ: ಶರತ್ ಬಚ್ಚೇಗೌಡ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ - ಜಯರಾಜ್ ಬಿಜೆಪಿಯ ಮಾಜಿ ನಗರಸಭಾ ಸದಸ್ಯ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಉಪ ಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಂಸದ ಬಚ್ಚೇಗೌಡ ನಿಷ್ಟಾವಂತ ಬಿಜೆಪಿ ಮುಖಂಡರನ್ನು ಕಡೆಗಣಿಸಿದ್ದಾರೆ ಎಂದು ಬಿಜೆಪಿಯ ಮಾಜಿ ನಗರಸಭಾ ಸದಸ್ಯ ಜಯರಾಜ್ ಆರೋಪಿಸಿದ್ದಾರೆ.
ಜಯರಾಜ್ ಬಿಜೆಪಿ ಮುಖಂಡ
ನಗರದಲ್ಲಿ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಬಿಜೆಪಿಯ ಮಾಜಿ ನಗರಸಭಾ ಸದಸ್ಯರಾದ ಜಯರಾಜ್, ರವಿ ಮತ್ತು ಸುಶೀಲಮ್ಮ ದೇವರಾಜ್, ನಾವು ಪಕ್ಷಕ್ಕೆ ಮೊದಲಿನಿಂದಲೂ ನಿಷ್ಟೆಯಿಂದ ದುಡಿದುಕೊಂಡು ಬಂದಿದ್ದೆವು. ಆದರೆ, ಇತ್ತೀಚೆಗೆ ಬಚ್ಚೇಗೌಡರು ನಿಷ್ಟಾವಂತ ಮುಖಂಡರನ್ನು ಕಡೆಗಣಿಸುತ್ತಿದ್ದು, ಈ ಬಾರಿ ನಾವು ಬಿಜೆಪಿಯಲ್ಲೆ ಉಳಿದುಕೊಳ್ಳೋದಾಗಿ ತಿಳಿಸಿದ್ದಾರೆ.
ಇನ್ನು ಉಪ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಪರ ಕೆಲಸ ಮಾಡದೇ ಎಂಟಿಬಿ ನಾಗರಾಜ್ಗೆ ಬೆಂಬಲ ನೀಡಿ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.