ದೇವನಹಳ್ಳಿ:ಹುಬ್ಬಳ್ಳಿ ಗಲಭೆಯ ಹಿಂದೆ ಮೌಲ್ವಿಗಳ ಪಾತ್ರ ಇದೆ ಎಂದು ಕಂಡುಬಂದಿದೆ. ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳಲ್ಲೂ ಇವರ ಪಾತ್ರ ಇರುವುದು ಸಾಬೀತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಹುಬ್ಬಳ್ಳಿ ಗಲಭೆಯಲ್ಲಿ ಮೌಲ್ವಿಗಳ ಪಾತ್ರದ ಬಗ್ಗೆ ಮಾಹಿತಿ ಇದೆ: ಸಿ.ಟಿ.ರವಿ - ಮೌಲ್ವಿಗಳ ತನಿಖೆ ಬಗ್ಗೆ ಸಿ ಟಿ ರವಿ ಪ್ರತಿಕ್ರಿಯೆ
ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಮಸೀದಿಗಳ ಮೌಲ್ವಿಗಳ ವಿಚಾರಣೆ ಕುರಿತು ಮಾತನಾಡಿದ ಸಿ.ಟಿ. ರವಿ, ತಪ್ಪಿದ್ದರೆ ಶಿಕ್ಷೆಯಾಗುತ್ತದೆ, ಇಲ್ಲ ಅಂದ್ರೆ ನಿರಪರಾಧಿಯಾಗ್ತಾರೆ. ತನಿಖೆ ಮಾಡುವುದು ತಪ್ಪೇನಲ್ಲ ಎಂದರು.

ಸಿ.ಟಿ. ರವಿ
ರಾಜ್ಯದಲ್ಲಿ ಎಸ್ಡಿಪಿಐ, ಪಿಎಫ್ಐ ಬ್ಯಾನ್ ವಿಚಾರವಾಗಿ ಮಾತನಾಡುತ್ತಾ, ಸಂಘಟನೆಗಳನ್ನು ನಿಷೇಧಿಸಲು ಎಲ್ಲಾ ರೀತಿಯ ಸಿದ್ಧತೆಗಳು ಶುರುವಾಗಿದೆ. ಸರ್ಕಾರ ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದೆ. ಭಯೋತ್ಪಾದನೆ ಸೃಷ್ಟಿಸಿ ಶಾಂತಿ ಅಂತ ಹೇಳಲು ಸಾಧ್ಯವಿಲ್ಲ. ಇಂಥವರ ಮುಖವಾಡ ಯಾವತ್ತಿದ್ರೂ ಕಳಚಿ ಬಿದ್ದೇ ಬೀಳುತ್ತೆ ಎಂದರು.
ಇದನ್ನೂ ಓದಿ:ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಸಂಚು.. ಮೌಲ್ವಿ ವಾಸಿಂ ಪಠಾಣ್ ವಿಡಿಯೋ ಬಿಡುಗಡೆ
TAGGED:
mla c T ravi