ಕರ್ನಾಟಕ

karnataka

ETV Bharat / state

ಪ್ರತ್ಯೇಕ ಪ್ರಕರಣ: ಮನೆ ಮುಂದೆ ನಿಲ್ಲಿಸಿದ್ದ 2 ಬೈಕ್​ಗಳ ಕಳವು - stolen

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಅನ್ನು ರಾತ್ರೋರಾತ್ರಿ ಕಳ್ಳರು ಬಂದು ಕದ್ದು ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಗುರುಸಿದ್ದಪ್ಪ ಲೇಔಟ್​ನಲ್ಲಿ ನಡೆದಿದೆ.

ಬೈಕ್​ಗಳ ಕಳವು

By

Published : Mar 13, 2019, 9:35 PM IST

ನೆಲಮಂಗಲ: ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಅನ್ನು ರಾತ್ರೋರಾತ್ರಿ ಕಳ್ಳರು ಬಂದು ಕದ್ದು ಪರಾರಿಯಾಗಿರುವ ಘಟನೆನೆಲಮಂಗಲ ತಾಲೂಕಿನ ಡಾಬಸ್ ಪೇಟೆಯ ಗುರುಸಿದ್ದಪ್ಪ ಲೇಔಟ್​ನಲ್ಲಿ ನಡೆದಿದೆ.

ವ್ಯಾಪಾರಿಯಾಗಿರುವ ಲೋಕೇಶ್ ಬಿಸ್​ನೆಸ್ ಕಾರಣಕ್ಕಾಗಿ ತನ್ನ ಸ್ನೇಹಿತನಿಂದ ಯಮಹಾ ಬೈಕ್​​ಅನ್ನು ತೆಗೆದುಕೊಂಡಿದ್ದರು. ವ್ಯಾಪಾರ ಮುಗಿಸಿದ ಲೋಕೇಶ್ ಮನೆಯ ಪೋರ್ಟಿಕೋದಲ್ಲಿ ನಿನ್ನೆ ರಾತ್ರಿ ಬೈಕ್ ನಿಲ್ಲಿಸಿ ಮಲಗಿದ್ದರು. ಬೆಳಗೆದ್ದು ನೋಡಿದಾಗಿ ಬೈಕ್ ನಾಪತ್ತೆಯಾಗಿತ್ತು. ಯಾರೋ ಕಳ್ಳರು ಬೈಕ್ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಬಸ್ ಪೇಟೆ ಪೊಲೀಸ್ ಠಾಣೆ

ಇನ್ನು ನೆಲಮಂಗಲ ಬಳಿಯ ಭೀಮೇಶ್ವರ ಕಾಲೋನಿಯಲ್ಲಿ ಮತ್ತೊಂದು ಬೈಕ್ ಕಳ್ಳತನ ಪ್ರಕರಣ ನಡೆದಿದೆ. ಅಭಿಷೇಕ್ ಅನ್ನುವರು ಪಲ್ಸರ್ ಬೈಕ್ಅನ್ನು ರಾತ್ರಿ ಮನೆ ಮುಂದೆ ನಿಲ್ಲಿಸಿದ್ದು, ಬೆಳಗೆದ್ದು ನೋಡಿದಾಗ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details