ಆನೇಕಲ್ : ಅತ್ತಿಬೆಲೆ ವೃತ್ತ ಪೊಲೀಸ್ ಠಾಣಾ ಪರಿಧಿಯಲ್ಲಿ 10 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಲಕ್ಕಡ್ ತಾಲೂಕಿನ ಅತಿ ಉಮಲವಾಡಿ ಬಳಿಯ ಅಮೇದನಹಳ್ಳಿ ನಿವಾಸಿ ಅರುಣಾಚಲಂ (50) ಬಂಧಿತ ಆರೋಪಿ. ಈತ ಬೈಕ್ ಕದಿಯುತ್ತಿರುವ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಆಧರಿಸಿ ಎಎಸ್ಪಿ ಲಕ್ಷ್ಮೀ ಗಣೇಶ್ ಅವರ ನಿರ್ದೇಶನದಲ್ಲಿ ಪ್ರಕರಣದ ತನಿಖೆ ಕೈಗೊಂಡ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಹೆಚ್.ಎಂ.ಮಹದೇವಪ್ಪ ತಂಡ, ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.