ಕರ್ನಾಟಕ

karnataka

ETV Bharat / state

ಕಂಟೇನರ್​ಗೆ ಬೈಕ್​ ಡಿಕ್ಕಿ: ಸ್ಥಳದಲ್ಲೇ ಬೈಕ್​ ಸವಾರ ಸಾವು - Bike collision to container

ಬಿದರಗುಪ್ಪೆ ಗ್ರಾಮದ ಸಿಲ್ಕ್ ಫಾರಂ ಬಳಿ ಶುಕ್ರವಾರ ರ್ರಾತ್ರಿ ಕಂಟೇನರ್ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

accident
ಅಪಘಾತ

By

Published : Jan 16, 2021, 3:13 PM IST

ಆನೇಕಲ್: ಕಂಟೇನರ್ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿದರಗುಪ್ಪೆ ಗ್ರಾಮದ ಸಿಲ್ಕ್ ಫಾರಂ ಬಳಿ ಕಳೆದ ರಾತ್ರಿ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿ ಯಡವನಹಳ್ಳಿ ಗ್ರಾಮದ ನಿವಾಸಿ ವೆಂಕಪ್ಪ ಕತ್ತಿ (37) ಎಂದು ಗುರುತಿಸಲಾಗಿದೆ. ಮೂಲ ಗದಗ ಜಿಲ್ಲೆಯವರಾದ ಇವರು ಬಿ.ಎಂ.ಟಿ.ಸಿ. ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ವೆಂಕಪ್ಪ ಕತ್ತಿ ಸರ್ಜಾಪುರದಿಂದ ಅತ್ತಿಬೆಲೆ ಕಡೆಗೆ ಬರುತ್ತಿರುವಾಗ ಅತ್ತಿಬೆಲೆ ಯಿಂದ ಬಂದ ಕಂಟೇನರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details