ಕರ್ನಾಟಕ

karnataka

ETV Bharat / state

ಕ್ರಷರ್ ಲಾರಿಯ ಧೂಳಿನಿಂದ ದಾರಿ ಕಾಣದೆ ಕಾರಿಗೆ ಬೈಕ್ ಡಿಕ್ಕಿ, ಸವಾರ ಸಾವು - ಕಾರಿಗೆ ಬೈಕ್ ಡಿಕ್ಕಿ ಸವಾರ ಸಾವು

ಕ್ರಷರ್ ಲಾರಿ ಸಂಚಾರದಿಂದ ಧೂಳು ಸಂಪೂರ್ಣ ಆವರಿಸಿದ ಪರಿಣಾಮ ರಸ್ತೆ ಕಾಣದೆ, ಎದುರು ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

Bike -car collision
ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

By

Published : Dec 14, 2019, 6:25 PM IST

ನೆಲಮಂಗಲ : ಜಲ್ಲಿಕಲ್ಲು ತುಂಬಿದ ಕ್ರಷರ್ ಲಾರಿಯ ಹಿಂದೆಯ ಹೋಗುತ್ತಿದ್ದ ಬೈಕ್​ಗೆ ಧೂಳು ಅವರಿಸಿದ ಪರಿಣಾಮ ದಾರಿ ಕಾಣದೆ, ಎದುರಿಗೆ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಮಾಕೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕಾರಿಗೆ ಬೈಕ್ ಡಿಕ್ಕಿ: ಸವಾರ ಸಾವು

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಅರೇಗುಜ್ಜನಹಳ್ಳಿ ಮೂಲದ ರವಿಕುಮಾರ್ ( 18 ) ಮೃತ ದುರ್ದೈವಿ. ಬೈಕ್ ಹಿಂಬದಿ ಕುಳಿತ್ತಿದ್ದ ದಿನೇಶ್( 18 ) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ನಂತರ ಸ್ಥಳೀಯರು ಕ್ರಷರ್ ಲಾರಿ ತಡೆದು ಪ್ರತಿಭಟನೆ ನಡೆಸಿದರು. ಈ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details