ಕರ್ನಾಟಕ

karnataka

ETV Bharat / state

ತಂಪು ತಂಪು ಎಳನೀರು ಸೋಂಕು ತಂದೀತು ಜೋಕೆ.. - ಎಳನೀರು

ಎಳನೀರು ದಾಹ ತೀರಿಸೋದು ಮಾತ್ರವಲ್ಲ, ಶರೀರದ ಉಷ್ಣತೆ ತಗ್ಗಿಸುವ ಶಕ್ತಿಯೂ ಇದಕ್ಕಿದೆ. ಅನೇಕ ಔಷಧೀಯ ಗುಣ ಎಳನೀರಿನಲ್ಲಿದ್ದು, ರೋಗಿಗಳಿಗೆ ವೈದ್ಯರು ಎಳನೀರು ಸೇವಿಸಲು ಹೇಳುತ್ತಾರೆ. ಆದರೆ ಇದೇ ಕೆಲವೊಮ್ಮೆ ಸೋಂಕು ತರುವ ಸಾಧ್ಯತೆಯಿದೆ.

tender coconut
ಎಳನೀರು ಮಾರಾಟ

By

Published : May 1, 2020, 11:02 AM IST

ಬೆಂಗಳೂರು :ಇದು ಬೇಸಿಗೆ ಕಾಲ. ಜನ ಒಮ್ಮೊಮ್ಮೆ ಬಿಸಿಲಿನ ತಾಪಕ್ಕೆ ಕೊರೊನಾ ಮಹಾಮಾರಿಯನ್ನೂ ಮರೆಯುವ ಸಾಧ್ಯತೆ ಇದೆ. ಬಾಯಾರಿತು ಎಂದು ಎಳನೀರು ಕುಡಿಯಲು ಮುಂದಾಗುವವರು ಸದ್ಯ ಒಂದು ಎಚ್ಚರಿಕೆ ವಹಿಸಲೇಬೇಕು.

ಎಳನೀರು ಕೇವಲ ದಾಹ ತೀರಿಸುವ ಪೇಯ ಮಾತ್ರವಲ್ಲ, ಶರೀರದ ಉಷ್ಣತೆ ತಗ್ಗಿಸುವ ಶಕ್ತಿಯೂ ಇದಕ್ಕಿದೆ. ಅನೇಕ ಔಷಧೀಯ ಗುಣ ಎಳನೀರಿನಲ್ಲಿದೆ. ರೋಗಿಗಳಿಗೆ ವೈದ್ಯರು ಎಳನೀರು ಸೇವಿಸಲು ಹೇಳುತ್ತಾರೆ. ಶರೀರದ ಆಯಾಸ ಹೋಗಲಾಡಿಸುವ, ಉಲ್ಲಾಸ, ಉತ್ಸಾಹ, ಲವಲವಿಕೆ ತುಂಬುವ ಶಕ್ತಿಯೂ ಇದಕ್ಕಿದೆ.

ಎಳನೀರು ಮಾರಾಟ ಬಲು ಜೋರು..

ಪ್ರತಿ ಆಸ್ಪತ್ರೆಯ ಸಮೀಪ, ಜನನಿಬಿಡ ಸ್ಥಳಗಳು, ಪ್ರಮುಖ ಮಾರ್ಗಳ ಜಂಕ್ಷನ್​ಗಳಲ್ಲಿ ಎಳನೀರನ್ನು ರಾಶಿ ಹಾಕಿ ಮಾರುವವರನ್ನು ಕಾಣುತ್ತೇವೆ. ಈ ವೇಳೆ ಎಳನೀರು ಸೇವಿಸುವವರು ಜಾಗ್ರತೆ ವಹಿಸೋದು ಅತ್ಯಗತ್ಯ. ಯಾಕಂದರೆ, ಎಳನೀರು ಸೇವಿಸುವಾಗ ಕೊರೊನಾ ಕೂಡಾ ಹರಡುವ ಸಾಧ್ಯತೆ ಇರುತ್ತದೆ.

ಸಾಮಾನ್ಯವಾಗಿ ಎಳನೀರನ್ನು ಮಾರುವವರು ತಮ್ಮಲ್ಲಿನ ಕತ್ತಿ ಅಥವಾ ಚಾಕುವಿನಿಂದ ಎಳನೀರನ್ನು ಕೊಚ್ಚಿ ಗ್ರಾಹಕರಿಗೆ ನೀಡುತ್ತಾರೆ. ಗ್ರಾಹಕ ಎಳನೀರನ್ನು ಬಾಯಲ್ಲಿ ಕಚ್ಚಿ ಕುಡಿದ ಬಳಿಕ ಅದರ ಒಳಗಿನ ತಿರುಳನ್ನು ತಿನ್ನಲು ಸಾಮಾನ್ಯವಾಗಿ ಅದೇ ಕತ್ತಿ ಅಥವಾ ಚಾಕುವನ್ನು ಬಳಸಿ ಎಳನೀರನ್ನು ಕಡಿದು ನೀಡುತ್ತಾರೆ ಅಥವಾ ಅದರಲ್ಲಿ ದೊಡ್ಡ ರಂಧ್ರ ಮಾಡುತ್ತಾರೆ. ಹೀಗೆ ಮಾಡುವುದರಿಂದ ಒಬ್ಬ ಗ್ರಾಹಕನಿಗೆ ಸೋಂಕಿದ್ದರೂ ಉಳಿದವರಿಗೆ ಅದು ಬಹಳ ಸುಲಭವಾಗಿ ಹರಡುವ ಸಾಧ್ಯತೆಗಳಿವೆ.

ರೋಗವನ್ನು ಸುಲಭವಾಗಿ ಹಬ್ಬಿಸುವ ತಾಣವಾಗಿ ಕೂಡ ಎಳನೀರು ವ್ಯಾಪಾರ ಕೇಂದ್ರ ಮಾರ್ಪಡುವ ಸಾಧ್ಯತೆ ಇರುವ ಹಿನ್ನೆಲೆ ಮಾರುವವರು, ಕುಡಿಯುವವರು ಕೊಂಚ ಎಚ್ಚರ ವಹಿಸುವುದು ಒಳಿತು. ಎಳನೀರನ್ನು ಮಾರುವವರು ಇಡಿಯಾಗಿ ಮಾರಬೇಕು ಅಥವಾ ಕೇವಲ ನೀರನ್ನು ಮಾತ್ರ ಕುಡಿಯಲು ಅನುವು ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಅದರ ಒಳಗಿನ ತಿರುಳನ್ನು ಸದ್ಯದ ಮಟ್ಟಿಗೆ ತಿನ್ನಲು ಅವಕಾಶ ನೀಡದಿರುವುದು ಒಳ್ಳೆಯದು.

ಇದರ ಜೊತೆಗೆ ಕೊರೊನಾ ಆತಂಕ ಮುಗಿಯುವವರೆಗೆ ಎಳನೀರನ್ನು ಕುಡಿಯುವವರು ಸ್ಥಳದಲ್ಲೇ ಕುಡಿಯದೇ ಪಾರ್ಸಲ್ ಕೊಂಡೊಯ್ಯುವುದು ಉತ್ತಮ. ಮನೆಗೆ ತೆಗೆದುಕೊಂಡು ಹೋಗಿ ಸ್ವಚ್ಛವಾಗಿ ತೊಳೆದು, ಮನೆಯಲ್ಲಿರುವ ಚಾಕು ಬಳಸಿ ಎಳನೀರನ್ನು ಒಡೆದು ಬಳಸುವುದು ಸೂಕ್ತ.

ABOUT THE AUTHOR

...view details