ದೇವನಹಳ್ಳಿ:ದಕ್ಷಿಣ ಭಾರತದಿಂದ ಜಪಾನ್ಗೆ ನೇರ ಸಂಪರ್ಕ ಒದಗಿಸುವ ಏಕೈಕ ನಿಲ್ದಾಣವೆಂದರೆ ಕೆಂಪೇಗೌಡ ವಿಮಾನ ನಿಲ್ದಾಣ (ಕೆಐಎಎಲ್) ಆಗಿದೆ. ಈ ಹಿಂದೆ ಬೆಂಗಳೂರು-ಟೋಕಿಯೊ ನಡುವೆ ವಾರಕ್ಕೆ ಎರಡು ಸಲ ಇದ್ದ ವಿಮಾನಸೇವೆಯನ್ನು ಇದೀಗ ಮೂರಕ್ಕೆ ಹೆಚ್ಚಿಸಲಾಗಿದೆ.
ಜಪಾನ್ ಏರ್ಲೈನ್ಸ್ (JAL) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್ನ ಟೋಕಿಯೊ (ನರಿಟಾ) ಗೆ ತಡೆರಹಿತ ವಿಮಾನ ಸೇವೆಯನ್ನ ಆರಂಭಿಸಿದೆ. ಈ ಹಿಂದೆ ಇದ್ದ ವಾರಕ್ಕೆ ಎರಡು ಸುತ್ತಿನ ಟ್ರಿಪ್ಗಳನ್ನ ಮೂರಕ್ಕೆ ಹೆಚ್ಚಿಗೆ ಮಾಡಲಾಗಿದೆ. ಇದಕ್ಕೆ ಕೆಐಎಎಲ್ನಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಚಾಲನೆ ನೀಡಿದರು.