ಕರ್ನಾಟಕ

karnataka

ETV Bharat / state

ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ ಪ್ರಕರಣ: ತನಿಖೆ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಮಾಹಿತಿ - ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ

ಕಲ್ಕೆರೆ ಕೆರೆಯಲ್ಲಿ ತೆಪ್ಪ‌ ಮಗುಚಿ ಟೆಕ್ಕಿ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಮೃತದೇಹ ಪತ್ತೆಗಾಗಿ ಇನ್ನೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Bengaluru techie drowns in Kalkere lake
ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ

By

Published : Feb 9, 2020, 3:23 PM IST

ಬೆಂಗಳೂರು:ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆಯಲ್ಲಿ ತೆಪ್ಪ‌ ಮಗುಚಿ ಟೆಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ಮುಂದುವರೆದಿದೆ.

ತೆಪ್ಪ ಮಗುಚಿ ಟೆಕ್ಕಿ ಕಣ್ಮರೆ, ಪತ್ತೆ ಕಾರ್ಯಾಚರಣೆ ಕುರಿತು ಡಿಸಿಪಿ ಮಾಹಿತಿ

ಈ‌ ಕುರಿತು ರಾಮಮೂರ್ತಿ ನಗರ ಪೊಲೀಸರು ಒಂದೆಡೆ ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಮಾತನಾಡಿ, ಇಬ್ಬರು ಸಾಫ್ಟ್​​​ವೇರ್​​ ಟೆಕ್ಕಿಗಳು ಕೆರೆ ಬಳಿ ತೆರಳಿದ್ದರು. ಆದ್ರೆ ರಾತ್ರಿ ತೆಪ್ಪದಲ್ಲಿ ಕುಳಿತು ಕೆರೆಯ ಮಧ್ಯ ತೆರಳಿದ್ದ ವೇಳೆ 50ಮೀಟರ್ ದೂರ ಹೋಗುತ್ತಿದ್ದಂತೆ ಹರಿಗೋಲು ಕೆಳಗೆ ಬಿದ್ದಿತ್ತು. ಅದನ್ನ ಹಿಡಿಯಲು ಯತ್ನಿಸಿದಾಗ ತೆಪ್ಪ ಮಗುಚಿ ಬಿದ್ದು ಸಚಿನ್ ನೀರಲ್ಲಿ ಮುಳುಗಿದ್ದಾರೆ ಎಂದು ಮಾಹಿತಿ ನೀಡಿದ್ರು.

ಸದ್ಯ ಎನ್​​ಡಿಆರ್​​ಎಫ್ ಹಾಗೂ ರಾಮಮೂರ್ತಿ ನಗರ ಪೊಲೀಸರು ಕಾರ್ಯಾಚರಣೆ ಮಾಡ್ತಿದ್ದಾರೆ. ಹಾಗೆಯೇ ಆದಷ್ಟು ಬೇಗ ಮೃತದೇಹ ಪತ್ತೆ ಹಚ್ಚುವುದೇ ನಮ್ಮ ಕೆಲಸ, ಕೆರೆಯ ಸುತ್ತ ಕಮರ್ಷಿಯಲ್ ಬೋರ್ಡಿಂಗ್ ಇಲ್ಲ. ಹಾಗೆ ತೆಪ್ಪ ಮಗುಚಿದಾಗ ಅಲ್ಲಿ ಯಾರೂ ಇರಲಿಲ್ಲ, ಮತ್ತೊಂದೆಡೆ ಯಾವುದೇ ಸೂಕ್ತ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಈ ದುರ್ಘಟನೆ ನಡೆದಿದೆ. ಇನ್ನು ಟೆಕ್ಕಿಗಳು ಯಾಕಾಗಿ ಅಲ್ಲಿ ಹೋದ್ರು ಅನ್ನೋದು ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನ ಕಲೆ ಹಾಕ್ತೇವೆ ಅಂತ ಡಿಸಿಪಿ ತಿಳಿಸಿದ್ರು.

ABOUT THE AUTHOR

...view details