ಕರ್ನಾಟಕ

karnataka

ETV Bharat / state

ಜಾರ್ಖಂಡ್​​ನಲ್ಲಿ ಕೊಲೆ ಆರೋಪಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು! - Bengaluru murder accused arrest

ಅಕ್ಟೋಬರ್​ 5ರಂದು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ದೇವನಾಥ್ ಎಂಬ್ರಾಮ್ ಬಂಧಿತ ಆರೋಪಿ. ಎಸ್ಐ ಶಂಕರಪ್ಪ ನೇತೃತ್ವದ ತಂಡ ಜಾರ್ಖಂಡ್ ರಾಜ್ಯದ ಸಾಂಘ ಜೌರಿ ಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದೆ.

ಬೆಂಗಳೂರು ಕೊಲೆ ಆರೋಪಿ ಬಂಧನ

By

Published : Oct 30, 2019, 6:45 PM IST

ಆನೇಕಲ್:ಅಕ್ಟೋಬರ್​ 5ರಂದು ನಗರದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಫಸ್ಟ್ ಕ್ರೈ ಬೇಬಿ ಶಾಪ್ ಮುಂಭಾಗ ನಡೆದ ವ್ಯಕ್ತಿಯೊಬ್ಬನ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೇವನಾಥ್ ಎಂಬ್ರಾಮ್ ಬಂಧಿತ ಆರೋಪಿ. ಎಸ್ಐ ಶಂಕರಪ್ಪ ನೇತೃತ್ವದ ತಂಡ ಜಾರ್ಖಂಡ್ ರಾಜ್ಯದ ಸಾಂಘ ಜೌರಿ ಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿದೆ.

ಜಾರ್ಕಂಡ್​ಗೆ ತೆರಳಿ ಕೊಲೆ ಆರೋಪಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು

ಘಟನೆಯ ವಿವರ: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ತರುಣ್ ಎಂಬಾತ ಕಾರ್ಮಿಕನಾಗಿದ್ದ. ಅದೇ ಕಾರ್ಖಾನೆಯಲ್ಲಿ ಕೊಲೆ ಆರೋಪಿ ದೇವನಾಥ್ ಎಂಬ್ರಾಮ್​ನ ಪತ್ನಿ ಕೂಡ ಕಾರ್ಮಿಕಳಾಗಿದ್ದಳು. ಜಾರ್ಖಂಡ್​​ನಿಂದ ಮೂರು ವರ್ಷದ ಹಿಂದೆ ಕೆಲಸ ಅರಸಿ ಪತ್ನಿ ಜೊತೆ ಬೊಮ್ಮಸಂದ್ರಕ್ಕೆ ಬಂದಿದ್ದ ಪತಿ ದೇವನಾಥ್ ಹೀಲಲಿಗೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು, ಐದು ವರ್ಷದ ಗಂಡು ಮಗುವಿನೊಂದಿಗೆ ವಾಸವಿದ್ದರು. ಆದರೆ ಇವರಿಬ್ಬರ ಬಾಳಲ್ಲಿ ಬಂದ ತರುಣ್, ದೇವನಾಥ್​ ಪತ್ನಿ ಜೊತೆ ಸಂಬಂಧ ಬೆಳೆಸಿದ್ದಾನೆ. ಇದನ್ನು ತಿಳಿದ ಗಂಡ ದೇವನಾಥ್, ಹೆಂಡತಿಯ ಜೊತೆ ಕಾದಾಡಿ ಬೊಮ್ಮಸಂದ್ರ ಬಿಟ್ಟು ಜಾರ್ಖಂಡ್​ಗೆ ತೆರಳಿದ್ದಾನೆ.

ಗಂಡನಿಲ್ಲದ್ದರಿಂದ ಪಿಜಿಯಲ್ಲಿದ್ದ ಪತ್ನಿ, ತರುಣ್ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಳಂತೆ. ಈ ಬಗ್ಗೆ ತಿಳಿದ ದೇವನಾಥ್​​, ಕೊಲೆಗೂ ಮುನ್ನ ಮೂರು ದಿನ ಹಿಂದೆ ಬೊಮ್ಮಸಂದ್ರಕ್ಕೆ ಬಂದು ತರುಣ್ ಚಲನವಲನಗಳನ್ನು ಗಮನಿಸುತ್ತಿದ್ದನಂತೆ. ಬಳಿಕ ಅಕ್ಟೋಬರ್​ 5ರ​ ರಾತ್ರಿ ತರುಣ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಹಿಂಬದಿಯಿಂದ ಬಂದು ಕತ್ತು ಕುಯ್ದು ಓಡಿ ಹೋಗಿದ್ದಾನೆ. ಆತ ಓಡಿ ಹೋದ ದೃಶ್ಯ ಹೆಬ್ಬಗೋಡಿಯ ಎರಡು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಆರೋಪಿಯ ಬೆನ್ನುಹತ್ತಿದ ಬೆಂಗಳೂರು ಉಪ ವಿಭಾಗದ ಡಿವೈಎಸ್ಪಿ ನಂಜುಂಡೇಗೌಡ, ಹೆಬ್ಬಗೋಡಿ ಸಿಐ ಬಿ.ಕೆ.ಶೇಖರ್, ಎಸ್ಐ ಶಂಕರಪ್ಪ, ಎಎಸ್ಐ ರಾಜಶೇಖರ, ಗಂಗರಾಜು, ನಾಗೇಶ್, ಮಹೇಶ್, ಉಮೇಶ್ ಅವರಿದ್ದ ತಂಡ, ಆರೋಪಿಯ ಜಾಡು ಹಿಡಿದು ಜಾರ್ಖಂಡ್ ರಾಜ್ಯದ ಜಾಮ್ತಾರಾ ಜಿಲ್ಲೆ ನಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸಾಂಘ ಜೌರಿ ಹಳ್ಳಿಯಲ್ಲಿ ದೇವನಾಥನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ABOUT THE AUTHOR

...view details