ಆನೇಕಲ್:ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಶನಿವಾರ ಬೀಸಿದ್ದ ಬಿರುಗಾಳಿ ಭಾನುವಾರವೂ ಪುನಃ ಜನತೆಯನ್ನು ಆತಂಕಕ್ಕೀಡಾಗುವಂತೆ ಮಾಡಿತು.
ಆನೇಕಲ್ನಲ್ಲಿ ಬಿರುಗಾಳಿ ಸಹಿತ ಮಳೆ : ಧರೆಗುರುಳಿದ ಮಸೀದಿ ಕಮಾನು - kannada news
ಆನೇಕಲ್ ಸುತ್ತಮುತ್ತ ಭಾನುವಾರ ಸುರಿದ ಆಲಿಕಲ್ಲು ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು.
ಆನೆಕಲ್ನಲ್ಲಿ ಬಿರುಗಾಳಿ ಸಹಿತ ಮಳೆ
ಬಿರುಗಾಳಿಯ ಹೊಡೆತಕ್ಕೆ ಆನೇಕಲ್-ಹೊಸೂರು ರಸ್ತೆಯ ಮಸೀದಿ ಕಮಾನು ಉರುಳಿ ಬಿದ್ದಿದೆ. ಶನಿವಾರ ರಾತ್ರಿಯಿಂದ ವಿದ್ಯುತ್ ಸಂಪರ್ಕವಿಲ್ಲದೆ ನಲುಗಿದ್ದ ಜನತೆ ಭಾನುವಾರವೂ ಕೂಡ ಪರದಾಡುವಂತಾಗಿತ್ತು. ಜಿಗಣಿ, ಬನ್ನೇರುಘಟ್ಟ, ಆನೇಕಲ್, ಹೊಸೂರು, ಸೂಳಗಿರಿ, ಚಂದಾಪುರ, ಸರ್ಜಾಪುರ, ಗೊಟ್ಟಿಗೆರೆ ಇನ್ನೂ ಮುಂತಾದ ಭಾಗಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದೆ.
ಗಾಳಿಯ ರಭಸಕ್ಕೆ 30 ಅಡಿಯ ಮಸೀದಿ ಕಂಬವೇ ಧರೆಗುರುಳಿದೆ. ಶನಿವಾರದ ಬಿರುಗಾಳಿಯ ಪರಿಣಾಮ ಭಾನುವಾರ ಇಡೀ ದಿನ ಬೆಸ್ಕಾಂ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯವರು ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು.