ಬೆಂಗಳೂರು:ರಸ್ತೆ ಪಕ್ಕದಲ್ಲಿ ಕಂಡುಬಂದ ಸೂಟ್ಕೇಸ್ನಲ್ಲಿ ಬಾಂಬ್ ಇದೆ ಎಂದು ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಲ್ಲಿ ಸೂಟ್ಕೇಸ್ ಕಂಡು ಬೆಚ್ಚಿಬಿದ್ದ ಜನ, ಅದ್ರಲ್ಲೇನಿದೆ? - ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸೂಟ್ಕೇಸ್ ಪತ್ತೆ
ಸಾರ್ವಜನಿಕ ಸ್ಥಳದಲ್ಲಿ ಸೂಟ್ಕೇಸ್ ಕಂಡು ಜನರು ಭಯಭೀತರಾದ ಘಟನೆ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇಂದು ಸಂಜೆ ವೇಳೆ ಖಾಲಿ ಸೂಟ್ ಕೇಸ್ ಪತ್ತೆಯಾಗಿತ್ತು. ಸೂಟ್ಕೇಸ್ ಕಂಡ ಜನರು ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಅದು ಖಾಲಿ ಸೂಟ್ಕೇಸ್ ಎಂಬುದು ಗೊತ್ತಾಗಿದೆ. ಬಳಿಕ ಜನರು ನಿರಾಳರಾಗಿದ್ದಾರೆ.
ಶ್ವಾನ ದಳ ಹಾಗೂ ಪಶ್ಚಿಮ ವಿಭಾಗ ಡಿಸಿಪಿ ರಮೇಶ್, ಎಸಿಪಿ ಹೆಚ್.ಎನ್. ಧರ್ಮೆಂದ್ರ ಸ್ಥಳಕ್ಕೆ ಭೇಟಿ ನೀಡಿ ಸೂಟ್ಕೇಸ್ ಪರಿಶೀಲನೆ ನಡೆಸಿದರು. ಇನ್ನು ಖಾಲಿ ಸೂಟ್ಕೇಸನ್ನು ದುಷ್ಕರ್ಮಿಗಳು ಬಿಟ್ಟು ಹೊಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪೊಲೀಸರು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.